ಚಾಕೋಲೆಟ್ ಹೀರೋ ಅಜಯ್ ರಾವ್ ವೆಡ್ಸ್ ಸ್ವಪ್ನಾ...?!

ಶನಿವಾರ, 13 ಡಿಸೆಂಬರ್ 2014 (09:33 IST)
ಜೈ ಭಜರಂಗಬಲಿ   ಚಿತ್ರ ಬಿಡುಗಡೆಯ ನಂತರ ಕನ್ನಡದ ಚಾಕೋಲೆಟ್ ಹೀರೋ ಅಜಯ್ ರಾವ್ ಮದುವೆಗೆ ಮಾಡಿ ಕೊಳ್ತೀನಿ   ಎಂದು ಹೇಳಿದ್ದರು. ಈಗ ಆ ಚಿತ್ರ ನಿನ್ನೆ ಬಿಡುಗಡೆ ಆಯ್ತು, ಅವರು ಸ್ವಪ್ನ ಜೊತೆ ಹಸೆಮಣೆ ಏರುತ್ತಿದ್ದಾರೆ. ಮೂಲದ ಪ್ರಕಾರ ಅಜಯ್   ಸ್ವಪ್ನ ಜೊತೆ ಇದೆ ತಿಂಗಳ 18 ರಂದು ಸಪ್ತಪದಿ ತುಳಿಯಲಿದ್ದಾರೆ. 
ಅಜಯ್ ಮತ್ತು ಸ್ವಪ್ನ ಹೊಸಪೇಟೆಯವರು. ಸ್ವಪ್ನ ಹಾಗೂ  ಅಜಯ್  ಕಸಿನ್ ಅವರ ನೆರೆ ಮನೆಯಾಕೆ.  ಕಳೆದ ಕೆಲವು ವರ್ಷಗಳಿಂದ  ಸ್ವಪ್ನ ಹಾಗೂ ಅಜಯ್ ಒಬ್ಬರನ್ನು ಒಬ್ಬರು ಅರಿತಿದ್ದಾರೆ. ಆದರೆ ಕಳೆದ ವರ್ಷದಿಂದ ಅವರು ಪ್ರೀತಿ ಮಾಡಲು ಆರಂಭ ಮಾಡಿದ್ದರು.ಎರಡು  ಕಡೆಯ ಪೋಷಕರಿಂದ ಸಮ್ಮತಿ ಮುದ್ರೆ ಸಿಕ್ಕಿದೆ. ಅಜಯ್ ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿದ್ದಾರೆ.ಅಜಯ್ ವೈವಾಹಿಕ ಬದುಕು ಹಸನಾಗಿರಲಿ.  

ವೆಬ್ದುನಿಯಾವನ್ನು ಓದಿ