ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಗುರುವಾರ, 8 ಅಕ್ಟೋಬರ್ 2020 (09:47 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಗ್ಗೆ ವಿಶೇಷ ಅಕ್ಕರೆ ಇರುವ ನಟ. ಇದೀಗ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಈ ಕಾರಣಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾದ ಟೀಸರ್ ಕೆಲವು ದಿನಗಳ ಹಿಂದೆಯೇ ಬಿಡುಗಡೆಯಾಗಿತ್ತು. ಈ ಟೀಸರ್ ಈಗ 5 ಮಿಲಿಯನ್ ವ್ಯೂ ಪಡೆದುಕೊಂಡಿದೆ. ಇದಕ್ಕೆ ಕಾರಣವಾದ ಅಭಿಮಾನಿಗಳಿಗೆ ದಾಸ ಧನ್ಯವಾದ ತಿಳಿಸಿದ್ದಾರೆ. ಇನ್ನು, ರಾಬರ್ಟ್ ಬಿಡುಗಡೆಗಾಗಿ ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 15 ರಿಂದ ಥಿಯೇಟರ್ ಗಳು ತೆರೆಯುತ್ತಿದ್ದು, ರಾಬರ್ಟ್ ಬಿಡುಗಡೆ ದಿನಾಂಕ ಯಾವಾಗ ಪ್ರಕಟವಾಗುತ್ತದೋ ಎಂದು ಅಭಿಮಾನಿಗಳು ಎದಿರು ನೋಡುತ್ತಿದ್ದಾರೆ.