ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

Sampriya

ಭಾನುವಾರ, 17 ಆಗಸ್ಟ್ 2025 (19:10 IST)
Photo Credit X
ಬೆಂಗಳೂರು: ನಿನ್ನೆ ಮಗನ ನಾಮಕರಣವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ನಟ ವಸಿಷ್ಠ ಸಿಂಹ ಅವರ ಇಂದು ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ಈ ಸಮಾರಂಭದಲ್ಲಿ ಸಿನಿಮಾ ರಂಗದ ದಿಗ್ಗಜರು ಪಾಲ್ಗೊಂಡಿದ್ದರು. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಫ್ಯಾಮಿಲಿ ಫ್ರೆಂಡ್‌ ಆಗಿರುವ ಸೋನಲ್ ಕೂಡಾ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

ಮಗನ ನಾಮಕರಣಕ್ಕೆ ಬಂದಿದ್ದ ಸೋನಲ್ ಅವರನ್ನು ವಸಿಷ್ಠ ಅವರು ಪ್ರೀತಿಯಿಂದ ಅಪ್ಪುಗೆ ನೀಡಿ ಸ್ವಾಗತಿಸಿದ್ದಾರೆ.  ಸೊಂಟ ಹಿಡಿದು ಅಪ್ಪುಗೆಯನ್ನು ನೀಡಿದ್ದನ್ನೇ ನೆಟ್ಟಿಗರು ಅಪರ್ಥ ಮಾಡಿಕೊಂಡಿದ್ದಾರೆ. ಇದೀಗ ಅದನ್ನೇ ಟ್ರೋಲ್ ಮಾಡುತ್ತಿದ್ದಾರೆ.

ತರುಣ್ ಸುಧೀರ್ ಹಾಗೂ ವಸಿಷ್ಠ ತುಂಬಾನೇ ಕ್ಲೋಸ್ ಫ್ರೆಂಡ್ಸ್‌. ಆದರೆ ನೆಟ್ಟಿಗರು ಮಾತ್ರ ವಸಿಷ್ಠ ಅವರು ನಡೆದುಕೊಂಡ ರೀತಿಗೆ ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಅವರ ಸ್ನೇಹವನ್ನು ಅಪರ್ಥ ಮಾಡಿಕೊಳ್ಳಬೇಡಿ ಎಂದು ಕಮೆಂಟ್ ಮಾಡಿದ್ದಾರೆ.

ಕಮೆಂಟ್‌ಗಳು ಹೀಗಿದೆ: ಸ್ವಾಗತಕ್ಕೆ ಸೊಂಟ ಹಿಡಿದುಕೊಳ್ಳಬೇಕಾ, ಮತ್ತೊಬ್ಬರು ಇಲ್ಲಿ ಪೂರ್ತಿ ವಿಡಿಯೋ ಹಾಕಿಲ್ಲ ಅದಕ್ಕೆ ಬೇರೆ ಅರ್ಥ ಮಾಡಿಕೊಳ್ಳಬೇಡಿ ಎಂದು ಅವರಿಬ್ಬರ ಸ್ನೇಹದ ಬಗ್ಗೆ ಅಪರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ. 

ಏನೇನೂ  ಯೋಚನೆ ಮಾಡ್ಬೇಡಿ, ಏನ್ ಜನ ಅವರಿಬ್ರು ಅಪ್ಪುಗೆ ಮಾಡಿದ್ದು. ವಿಡಿಯೋ ಮಾಡಿದ್ದ ಅರ್ಥಂಬರ್ಧ,  ಬೇರೆಯವರ ಬಗ್ಗೆ ಮಾತಾನಾಡಿದ್ರೆ ಜನರಿಗೆ  ತಿಂದಾ ಅನ್ನ ಅರಗಲ್ಲ ಎಂದು ಅವರಿಬ್ಬ ಸ್ನೇಹದ ಬಗ್ಗೆ ಸಪೋರ್ಟ್ ಮಾಡಿದ್ದಾರೆ. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ