ತಮ್ಮ ಪುಟ್ಟ ಅಭಿಮಾನಿಗೆ ಸಹಾಯಹಸ್ತ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಶುಕ್ರವಾರ, 13 ಏಪ್ರಿಲ್ 2018 (09:28 IST)
ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಅಲ್ಲ ರೀಯಲ್ ಲೈಫ್ ನಲ್ಲೂ ಕೂಡ ಕಷ್ಟದಲ್ಲಿರುವ ತಮ್ಮ ಅಭಿಮಾನಿಗಳಿಗೆ ಸಹಾಯಹಸ್ತ ನೀಡಿ ಹೀರೋ ಎನಿಸಿಕೊಂಡಿದ್ದಾರೆ.

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಅದೇರೀತಿ ಹೃದಯದಲ್ಲಿನ ರಂಧ್ರದಿಂದ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕಿಯೊಬ್ಬಳು ಕೂಡ ತನ್ನ ನೆಚ್ಚಿನ ನಟ ದರ್ಶನ್ ಅವರನ್ನು ನೋಡಲು ಹಂಬಲಿಸುತ್ತಿದ್ದಾಳಂತೆ.

 

ಇದನ್ನು ತಿಳಿದ ದರ್ಶನ್ ಅವರು ಆಕೆಯನ್ನು ಯಜಮಾನ ಶೂಟಿಂಗ್ ಸ್ಪಾಟ್‌‌‌‌ಗೆ ಕರೆಸಿಕೊಂಡು ಮಾತನಾಡಿಸಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಬಾಲಕಿ ಹಾಗೂ ಮನೆಯವರಿಗೆ ಸಾಂತ್ವನ ಹೇಳಿ ಬಾಲಕಿ ಚಿಕಿತ್ಸೆಗೆ ನೆರವಾಗುವುದಾಗಿ ಧೈರ್ಯ ಹೇಳಿದ್ದಾರೆ. 


 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ