ಅಡುಗೆ ಮಾಡುವಾಗ ಯಾವ ದಿಕ್ಕಿಗೆ ಮುಖ ಮಾಡಿ ಮಾಡಿದರೆ ಉತ್ತಮ ಗೊತ್ತಾ..?
ಶುಕ್ರವಾರ, 13 ಏಪ್ರಿಲ್ 2018 (07:49 IST)
ಬೆಂಗಳೂರು : ಕೆಲವರು ತಮಗೆ ಅನುಕೂಲವಾದ ಕಡೆ ಅಡುಗೆ ಮನೆಯನ್ನು ನಿರ್ಮಿಸಿಕೊಳ್ಳುತ್ತಾರೆ. ಆದರೆ ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅಡುಗೆಯನ್ನು ಕೂಡ ಸರಿಯಾದ ದಿಕ್ಕನ ಕಡೆಗೆ ಮುಖಮಾಡಿ ಮಾಡಬೇಕು ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಡುಗೆ ಮಾಡುವಾಗ ಯಾವ ದಿಕ್ಕಿಗೆ ಮುಖ ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಅಡುಗೆಯನ್ನು ಮಾಡುವಾಗ ಉತ್ತರ ದಿಕ್ಕಿಗೆ ಮುಖಮಾಡಿ ಅಡುಗೆ ಮಾಡಕೂಡದು. ಹಾಗೇ ಒಂದು ಹನಿ ನೀರನ್ನು ಕೂಡ ಕುಡಿಯಲು ಉತ್ತರ ದಿಕ್ಕು ನಿಷಿದ್ಧ ಎಂಬುದನ್ನು ಗಮನಿಸಿ. ಪೂರ್ವದತ್ತ ಮುಖ ಮಾಡುವುದು ಉತ್ತಮ. ಆಹಾರ ಸಂವರ್ಧನಾ, ತಯಾರಿಕಾ ಪ್ರಗತಿ, ಸಾಫಲ್ಯ, ರುಚಿ, ಪ್ರಸನ್ನತೆಗಳು ಪೂರ್ವದಿಕ್ಕಿನ ಕಡೆಯಿಂದಲೇ ಲಭ್ಯ. ಉತ್ತಮ ಜೀರ್ಣಕ್ರಿಯೆ ಆರೋಗ್ಯ ಸಂವರ್ಧನೆಗಳಿಗೆಲ್ಲ ಇದು ಸೂಕ್ತ. ಒಲೆಯೋ, ಸ್ಟೋವ್, ಗ್ಯಾಸ್ ಬರ್ನರ್ ಇತ್ಯಾದಿ ಪೂರ್ವಕ್ಕೆ ಸಂಯೋಜನೆಗೊಂಡ ಆಗ್ನೇಯ ದಿಕ್ಕಿನಲ್ಲಿ ಸ್ಥಿತಗೊಳ್ಳಬೇಕು ಎಂದು ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ