ದರ್ಶನ್ ಬಳಿಕ ಪುನೀತ್ ರಾಜಕುಮಾರ್ ಭೇಟಿ ಮಾಡಿದ ಚಂದನ್ ಶೆಟ್ಟಿ: ಕಾರಣವೇನು ಗೊತ್ತಾ?

ಬುಧವಾರ, 12 ಫೆಬ್ರವರಿ 2020 (09:35 IST)
ಬೆಂಗಳೂರು: ಬಿಗ್ ಬಾಸ್ ಖ‍್ಯಾತಿ ರ್ಯಾಪರ್ ಚಂದನ್ ಶೆಟ್ಟಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿವಾಸಕ್ಕೆ ತೆರಳಿ ಪವರ್ ಸ್ಟಾರ್ ದಂಪತಿಯನ್ನು ಭೇಟಿಯಾಗಿದ್ದಾರೆ.


ಮೊನ್ನೆಯಷ್ಟೇ ಚಂದನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿಯಾಗಿ ಬಂದಿದ್ದರು. ಅದೂ ತಮ್ಮ ಭಾವಿ ಪತ್ನಿ ನಿವೇದಿತಾ ಗೌಡ ಜತೆ. ಇದೀಗ ಪವರ್ ಸ್ಟಾರ್ ಮನೆಗೂ ನಿವೇದಿತಾ ಜತೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ.

ಇದೇ ತಿಂಗಳು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ಕಾರ್ಯಕ್ರಮವಿದ್ದು, ಇದಕ್ಕೆ ಆಹ್ವಾನಿಸಲೆಂದೇ ಚಂದನ್ ಈಗ ಸ್ಟಾರ್ ನಟರ ಮನೆಗೆ ಖುದ್ದಾಗಿ ಹೋಗುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ