ಬೆಂಗಳೂರು: ಲಕ್ಷ್ಮೀ ನಿವಾಸ ಧಾರವಾಹಿಯ ಜಾಹ್ನವಿ ಪಾತ್ರಧಾರಿ ನಟಿ ಚಂದನಾ ಅನಂತ ಕೃಷ್ಣ ಈಗ ರಿಯಲ್ ಲೈಫ್ ನಲ್ಲಿ ಮದುವೆಯಾಗಲು ಹೊರಟಿದ್ದಾರೆ. ಈಗ ಅವರು ಮದುವೆಯಾಗಲಿರುವ ಹುಡುಗನ ಜೊತೆಗಿರುವ ಫೋಟೋ ಕೂಡಾ ರಿವೀಲ್ ಆಗಿದೆ.
ಚಂದನಾ ಉದ್ಯಮಿ ಪ್ರತ್ಯಕ್ಷ್ ಎಂಬವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಕೆಲವು ದಿನಗಳಿಂದ ಸುದ್ದಿ ಓಡಾಡುತ್ತಿತ್ತು. ಆದರೆ ಚಂದನಾ ಇದುವರೆಗೆ ಇದನ್ನು ಖಚಿತಪಡಿಸಿರಲಿಲ್ಲ. ಆದರೆ ಈಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಗಿರುವ ಫೋಟೋ ವೈರಲ್ ಆಗಿದೆ.
ನವಂಬರ್ 28 ಕ್ಕೆ ಉದ್ಯಮಿ ಪ್ರತ್ಯಕ್ಷ್ ಜೊತೆ ಚಂದನಾ ವೈವಾಹಿಕ ಜೀವನಕ್ಕೆ ಕಾಡಲಿದ್ದಾರೆ. ಇದು ಕುಟುಂಬದವರೇ ನಿಶ್ಚಿಯಿಸಿದ ಮದುವೆಯಾಗಿದ್ದು ಬೆಂಗಳೂರಿನಲ್ಲೇ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ತಮ್ಮ ಕಿರುತೆರೆ ಆಪ್ತರು, ಸ್ನೇಹಿತರಿಗೆ ಚಂದನಾ ಮದುವೆಯ ಕರೆಯೋಲೆ ನೀಡಿದ್ದಾರೆ.
ಬಿಗ್ ಬಾಸ್ ಶೋ, ಕನ್ನಡ ಧಾರವಾಹಿಗಳಲ್ಲಿ ನಟಿಸಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಚಂದನಾ ಮದುವೆ ಹುಡುಗನ ಫೋಟೋ ಪ್ರಕಟವಾಗುತ್ತಿದ್ದಂತೇ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನಿಮ್ಮ ಜೋಡಿ ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.