ಕನ್ನಡದ ವಿವಾದ ಮೈಮೇಲೆಳೆದುಕೊಂಡ ಕಿರುತೆರೆ ನಟ ಚಂದು ಗೌಡ
ಇದು ವಿವಾದವಾಗುತ್ತಿದ್ದಂತೇ ಇಬ್ಬರೂ ಕಲಾವಿದರು ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಮಾಡಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರಿನ ಶೇ.70 ರಿಂದ 80 ಜನ ತೆಲುಗು ಧಾರವಾಹಿ ನೋಡುತ್ತಾರೆ ಎಂದು ಹೇಳುವುದು ನಮ್ಮ ಉದ್ದೇಶವಾಗಿತ್ತು. ನಾನು ಹುಟ್ಟಿ ಬೆಳೆದಿರುವುದು ಕರ್ನಾಟಕದಲ್ಲೇ. ಆ ಸಂದರ್ಶನವನ್ನು ಸರಿಯಾಗಿ ನೋಡಿದರೆ ನಿಮಗೆ ನಿಜಾಂಶ ತಿಳಿಯುತ್ತದೆ. ಕನ್ನಡವನ್ನು ಕೆಳಗಿಳಿಸುವ ಕೆಲಸ ಯಾವತ್ತೂ ಮಾಡಲ್ಲ.ದುಡ್ಡಿಗೋಸ್ಕರ ಕನ್ನಡವನ್ನು ಮಾರಿದ್ದೇವೆ ಎಂಬ ಆಪಾದನೆ ನಮ್ಮ ಮೇಲೆ ಕೇಳಿಬಂದಿದೆ. ಅಂತಹ ಕೀಳುಮಟ್ಟದ ಕೆಲಸ ಯಾವತ್ತೂ ಮಾಡಲ್ಲ ಎಂದು ಚಂದು ಗೌಡ ಸ್ಪಷ್ಟನೆ ನೀಡಿದ್ದಾರೆ.