ಕನ್ನಡಕ್ಕೆ ಅವಮಾನ: ಕೊನೆಗೂ ಕನ್ನಡಿಗರ ಕ್ಷಮೆ ಕೇಳಿದ ಗೂಗಲ್ ಇಂಡಿಯಾ

ಶುಕ್ರವಾರ, 4 ಜೂನ್ 2021 (09:16 IST)
ಬೆಂಗಳೂರು: ಕನ್ನಡ ಅತ್ಯಂತ ಕೆಟ್ಟ ಭಾಷೆ ಎಂದು ವಿವಾದಕ್ಕೊಳಗಾಗಿದ್ದ ಗೂಗಲ್ ಸಂಸ್ಥೆ ಕೊನೆಗೂ ತನ್ನ ಪ್ರಮಾದಕ್ಕೆ ಕನ್ನಡಿಗರ ಕ್ಷಮೆ ಯಾಚಿಸಿದೆ.

 

ಗೂಗಲ್ ನಲ್ಲಿ ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಕನ್ನಡ ಎಂದು ಉತ್ತರ ಬರುತ್ತಿತ್ತು. ಇದರ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದರು. ಇತರ ಭಾಷೆಯವರಿಂದಲೂ ಕನ್ನಡಿಗರಿಗೆ ಬೆಂಬಲ ಸಿಕ್ಕಿತ್ತು.

ವಿವಾದ ದೊಡ್ಡ ಮಟ್ಟಕ್ಕೆ ತಿರುಗುತ್ತಿದ್ದಂತೇ ಗೂಗಲ್ ಇಂಡಿಯಾ ಪ್ರಕಟಣೆ ನೀಡಿ, ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಯಾಚಿಸುತ್ತೇವೆ. ಕನ್ನಡ ಅತ್ಯಂತ ಸುಂದರ ಭಾಷೆ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ