ಚಾರ್ಮಿಂಗ್ ನಟ ಅನಂತ್ ನಾಗ್ ಪ್ಲಸ್ ಪಾಯಿಂಟ್

ಗುರುವಾರ, 27 ನವೆಂಬರ್ 2014 (10:25 IST)
ಸಾಕಷ್ಟು ದಿನಗಳ ಕಾಲ ನಟ ಅನಂತ್ ನಾಗ್ ಅವರು ಯಾವ ಮಾಧ್ಯಮ ಮಂದಿಯ ಕಣ್ಣಿಗೂ  ಕಂಡಿರಲಿಲ್ಲ. ಎಲ್ಲಿ ಹೋದರು ಈ ಹಿರಿಯ ನಟ ಎಂದು ಕಾಡಿದ್ದೂ ಉಂಟು. ಆದರೆ ಈಗ ಬಂದಿರುವ ಸುದ್ದಿ ಅಂದ್ರೆ ಅವರು + ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪ್ಲಸ್ ಚಿತ್ರದಲ್ಲಿ ವಿಶೇಷ ಪಾತ್ರಧಾರಿ ಆಗಿರುವ  ಅನಂತ್ ಅದಕ್ಕೆಂದು ವಿಭಿನ್ನವಾದ ಕಾಸ್ಟೂಮ್ ಗಳನ್ನು ಧರಿಸಿದ್ದಾರೆ.

ಇದರಲ್ಲಿ ವಿದೇಶದಿಂದ ಭಾರತಕ್ಕೆ ಬಂದು ನೆಲೆಸಿರುವ ಒಳ್ಳೆಯ ಮನದ ವ್ಯಕ್ತಿ. ದಾರಿ ತಪ್ಪುತ್ತಿರುವ ಯುವ ಪೀಳಿಗೆಯನ್ನು ಕಾಪಾಡುವ ಮಹಾತ್ಮ. ಈ ಚಿತ್ರದಲ್ಲಿ ಅನೇಕ ವಿಶೇಷಗಳಿದ್ದು  ಅನಂತ್ ನಾಗ್ ಅವರು ಒಂದರ್ಥದಲ್ಲಿ  ಚಿತ್ರದ ಹೀರೋ ಆಗಿದ್ದಾರೆ.
 
ಕಿರುತೆರೆ, ಇಲ್ಲವೇ ಪೋಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅನಂತ್ ನಾಗ್ ಅವರು ಈ ಚಿತ್ರದ ಮುಖಾಂತರ ಮತ್ತೆ ಹೀರೋ  ಆಗಿದ್ದಾರೆ. ಇವರ ಜೊತೆ ಹಿರಿಯ ನಟಿ ಸುಧಾರಾಣಿ ಅಭಿನಯಿಸುತ್ತಿದ್ದಾರಂತೆ. ಮುಖ್ಯವಾಗಿ ಅನಂತ್ ನಾಗ್ ಅವರು ಕನ್ನಡದ ಚಾರ್ಮಿಂಗ್ ನಟ. ಎಂತಹ ಪಾತ್ರಗಳು ದೊರಕಿದರು ಸಹಿತ ಯಾವುದೇ ರೀತಿಯಲ್ಲೂ ಅದಕ್ಕೆ ಮೋಸ ಜೀವ ತುಂಬುವುದರಲ್ಲಿ ಸಿದ್ಧ ಹಸ್ತರು. ಈಗ ಆಪ್ತ ಸಮಾಲೋಚಕನ ಪಾತ್ರಧಾರಿ ಆಗಿದ್ದಾರೆ. ದಾರಿ ತಪ್ಪುತ್ತಿರುವ ಯುವ ಜನತೆಗೆ ಬುದ್ಧಿ ಹೇಳಲು ಹೊರಟಿದ್ದಾರೆ.  

ವೆಬ್ದುನಿಯಾವನ್ನು ಓದಿ