ಬಹುಭಾಷಾ ನಟಿ ಛಾಯಾ ಸಿಂಗ್ ಕನ್ನಡ ಕಿರುತೆರೆಗೆ

ಸೋಮವಾರ, 17 ಏಪ್ರಿಲ್ 2023 (09:00 IST)
Photo Courtesy: Twitter
ಬೆಂಗಳೂರು: ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಛಾಯಾ ಸಿಂಗ್ ಈಗ ಕನ್ನಡ ಕಿರುತೆರೆಗೆ ಬರುತ್ತಿದ್ದಾರೆ.

ಕನ್ನಡದಿಂದ ತಮಿಳು ಸಿನಿಮಾಗೆ ಹೋಗಿದ್ದ ಛಾಯಾ ಸಿಂಗ್ ಮದುವೆ ಬಳಿಕ ಕೆಲವು ಸಮಯ ಬಣ್ಣದ ಲೋಕದಿಂದ ದೂರವುಳಿದಿದ್ದರು.

ಇದೀಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಅಮೃತಧಾರೆ ಎನ್ನುವ ಧಾರವಾಹಿಯಲ್ಲಿ ಛಾಯಾ ಸಿಂಗ್ ನಾಯಕಿ ಪಾತ್ರ ಮಾಡಲಿದ್ದಾರೆ. ನಾಯಕನ ಪಾತ್ರದಲ್ಲಿ ರಾಜೇಶ್ ನಟರಂಗ ಅಭಿನಯಿಸುತ್ತಿದ್ದಾರೆ. ಛಾಯಾ ಸಿಂಗ್ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಿರುವುದಕ್ಕೆ ವೀಕ್ಷಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ