ಯಶ್-ರಾಧಿಕಾ ಹಳೇ ವಿಡಿಯೋ ವೈರಲ್: ಏನಿದೆ ಇದರಲ್ಲಿ?!

ಶುಕ್ರವಾರ, 14 ಏಪ್ರಿಲ್ 2023 (11:27 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಂದು ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ. ಹೀಗಾಗಿ ರಾಧಿಕಾ ಪಂಡಿತ್ ವಿಶೇಷ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

ಇದು ಕೆಜಿಎಫ್ ಸಿನಿಮಾ ಶೂಟಿಂಗ್ ಸಂದರ್ಭದ್ದಾಗಿದೆ. ರಾಕಿ ಭಾಯಿ ಗೆಟಪ್ ನಲ್ಲಿರುವ ಯಶ್ ನೋಡಲು ರಾಧಿಕಾ ಶೂಟಿಂಗ್ ಸ್ಪಾಟ್ ಗೆ ಪುತ್ರಿ ಐರಾಳನ್ನು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಾರೆ. ಈ ವೇಳೆ ಇಬ್ಬರೂ ಖುಷಿಯಿಂದ ಬರಮಾಡಿಕೊಳ್ಳುವ ಕ್ಷಣ ಇದಾಗಿದೆ. ಈ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ