ತಮಿಳು ನಟ ಶಂಶುದ್ದೀನ್ ಇಬ್ರಾಹಿಂ ಬಂಧಿಸಿದ ಚೆನ್ನೈ ಪೊಲೀಸರು

ಬುಧವಾರ, 29 ಜುಲೈ 2020 (10:55 IST)
Normal 0 false false false EN-US X-NONE X-NONE

ಚೆನ್ನೈ :  ಅಕ್ರಮವಾಗಿ ಜೂಜು ಆಡಿದ ಆರೋಪದ ಮೇಲೆ ತಮಿಳು ನಟ ಶಂಶುದ್ದೀನ್ ಇಬ್ರಾಹಿಂ ಅನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
 


ನುಂಗಬಕ್ಕಂ ಎಂಬಲ್ಲಿರುವ ತಮ್ಮ ಒಡೆತನದ ಅಪಾರ್ಟ್ ಮೆಂಟ್ ನಲ್ಲಿ ಹಲವರನ್ನು ಕರೆದು ಜೂಜು ಆಡುತ್ತಿದ್ದಾರಂತೆ. ಈ ಬಗ್ಗೆ ಮಾಹಿತಿ ತಿಳಿದ ಚೆನ್ನೈ ಪೊಲೀಸರು ಮನೆ ಮೇಲೆ ದಾಳಿ ಮಾಡಿ ನಟ ಶಂಶುದ್ದೀನ್  ಇಬ್ರಾಹಿಂ ಸೇರಿದಂತೆ 11 ಮಂದಿಯನ್ನು ಬಂಧಿಸಿ, ಅಲ್ಲಿದ್ದ ವಾಹನ, ಹಣ, ಮೊಬೈಲ್, ಜೂಜು ಟೋಕನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇವರಲ್ಲಿ ಸಿನಿಮಾ ನಟರೇ ಹೆಚ್ಚಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ಶಂಶುದ್ದೀನ್  ಇಬ್ರಾಹಿಂ ತಮಿಳಿನ ಕಿಕ್, ರೇಸುಗುರ್ರಂ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದರು. ಹಾಗೇ ಕನ್ನಡದಲ್ಲಿ ಗೇಮ್ ಮತ್ತು ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾದಲ್ಲಿ ನಟಿಸಿದ್ದರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ