'ಶಾರ್ಪ್ ಶೂಟರ್' ಚಿತ್ರದಲ್ಲಿ ಹಾಸ್ಯನಟ ಚಿಕ್ಕಣ್ಣ ಗಾನಸುಧೆ

ಗುರುವಾರ, 2 ಜುಲೈ 2015 (11:40 IST)
ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ದಿಗಂತ್ ಹಾಗೂಪ್ರಸಿದ್ಧ ಹಾಸ್ಯ ನಟ ಚಿಕ್ಕಣ್ಣ ಅವರಿಬ್ಬರೂ ಮೊಟ್ಟಮೊದಲ ಬಾರಿಗೆ ಶಾರ್ಪ್ ಶೂಟರ್  ಚಿತ್ರದಲ್ಲಿ ಹಾಡಿದ್ದಾರೆ. ನಟನೆಯ ಮೂಲಕ ಜನರ ಗಮನ ಸೆಳೆದಿದ್ದ ಈ ಜೋಡಿ ಈಗ  ಹಾಡಿನ ಮೂಲಕ ಗಮನ ಸೆಳೆಯಲು ಸಿದ್ಧರಾಗುತಿದ್ದಾರೆ. ಈ ಹಾಡನ್ನು ಚಿಕ್ಕಣ್ಣ ಖುದ್ದು ಬರೆದಿದ್ದಾರೆ. ನಂಬಿ ಪ್ಲೀಸ್ ಎಂದು ಹೇಳುತ್ತಾ ಜನರ ಮುಂದೆ ತಾವು ಹಾಡನ್ನು ಹಾಡಿದ್ದಾರೆ. 
ಕಣ್ಣಲ್ಲೇ ಎಲ್ಲಿತನಕ ಅಬ್ಬಬ್ಬ ಹೀಗೆ, ಕಳ್ಳಾಟ ಆಡುವುದು ಎಂದು ಬರೆದು ಹಾಡಿದ್ದಾರೆ ಚಿಕ್ಕಣ್ಣ. ಸಿನಿ ಸಾಹಿತ್ಯ ಬರೆಯುವುದರ ಮೂಲಕ  ಚಿತ್ರರಂಗಕ್ಕೆ ಎಂಟ್ರಿ ಆದ ಗೌಸ್ ಪೀರ್ ಶಾರ್ಪ್ ಶೂಟರ್ ಮೂಲಕ ಈಗ ನಿರ್ದೇಶಕರ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಈ ಮೊದಲು ಲಕ್ಕಿ ಚಿತ್ರಕ್ಕೆ ಕಥೆಯನ್ನು ಬರೆದಿದ್ದರು. 
 
ಈ ತಿಂಗಳಲ್ಲಿ ಶಾರ್ಪ್ ಶೂಟರ್ ಗೆ ಪ್ರಚಾರಕಾರ್ಯ ಆರಂಭ ಮಾಡಲಿದ್ದಾರೆ ಸಿನಿತಂದದವರು. ಇದರಲ್ಲಿ ಮೊಟ್ಟ ಮೊದಲಬಾರಿ  ಆಕ್ಷನ್ ಹೀರೋ ಆಗಿದ್ದಾರಂತೆ ದಿಗಂತ್. ಅಲ್ಲದೆ ಚಿಕ್ಕಣ್ಣ ಸಹಿತ ಭಿನ್ನರೀತಿಯಲ್ಲಿ ಜನರ ಮುಂದೆ ಬರುತ್ತಿದ್ದಾರೆನ್ನುವ ಸಂಗತಿಯನ್ನು ನಿರ್ದೇಶಕರು ಹೇಳಿದ್ದಾರೆ. ಎಸ್ಬಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಬಾಲಸುಬ್ರಮಣ್ಯಂ ಮತ್ತು ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಕರುಣಾಕರ್ ಛಾಯಾಗ್ರಹಣ,ಶಿವ ಸಂತೋಷ್ ಸಂಗೀತ ನಿರ್ದೇಶನವಿದೆ.  

ವೆಬ್ದುನಿಯಾವನ್ನು ಓದಿ