ವಿಚ್ಛೇದನ ರೂಮರ್ ಬಳಿಕ ಅಣ್ಣನ ಜೊತೆ ಕಾಣಿಸಿಕೊಂಡ ಚಿರಂಜೀವಿ ಪುತ್ರಿ

ಸೋಮವಾರ, 31 ಜನವರಿ 2022 (10:25 IST)
ಹೈದರಾಬಾದ್: ಪತಿ ಕಲ್ಯಾಣ್ ದೇವ್ ಜೊತೆಗಿನ ದಾಂಪತ್ಯ ವಿರಸದ ರೂಮರ್ ಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಈಗ ಅಣ್ಣ ರಾಮ್ ಚರಣ್ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ರಾಮ್ ಚರಣ್ ಜೊತೆಗೆ ಮುಂಬೈಗೆ ತೆರಳಿರುವ ಶ್ರೀಜಾ ಫೋಟೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ತಾನೀಗ ಸಂತೋಷವಾಗಿ ಬದುಕಿರಲು ಕಾರಣವೇ ಇವರು ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಶ್ರೀಜಾ ಪತಿ ಕಲ್ಯಾಣ್ ದೇವ್ ರನ್ನು ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ್ದು, ಅವರ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಸುದ್ದಿ ಹುಟ್ಟಿಕೊಂಡಿತ್ತು. ಇಂದು ಶ್ರೀಜಾ ಈ ಪೋಸ್ಟ್ ಆ ಸುದ್ದಿಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ