ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಫಾರ್ಮ್ ಹೌಸ್ ನ ಕುದುರೆಗಳ ಮಾರಾಟ

Krishnaveni K

ಬುಧವಾರ, 8 ಅಕ್ಟೋಬರ್ 2025 (17:10 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದರೆ ಇತ್ತ ಅವರ ಫಾರ್ಮ್ ಹೌಸ್ ನಲ್ಲಿ ಕುದುರೆಗಳನ್ನು ಮಾರಾಟಕ್ಕಿಡಲಾಗಿದೆ.

ದರ್ಶನ್ ಪ್ರಾಣಿಪ್ರಿಯ. ಅದರಲ್ಲೂ ಕುದುರೆಗಳೆಂದರೆ ಅವರಿಗೆ ಅಚ್ಚುಮೆಚ್ಚು. ತಮ್ಮ ಫಾರ್ಮ್ ಹೌಸ್ ನಲ್ಲಿ ಕುದುರೆಗಳನ್ನು ಸಾಕಿದ್ದಾರೆ. ಇವುಗಳ ಪೈಕಿ ಕೆಲವನ್ನು ತಮ್ಮ ಶೂಟಿಂಗ್ ಗೂ ಬಳಸಿದ್ದಾರೆ. ಇನ್ನು, ತಮಗೆ ಸಮಯ ಸಿಕ್ಕಾಗ ಮಗನ ಜೊತೆ ಕುದುರೆ ಸವಾರಿ ಮಾಡುವ ವಿಡಿಯೋಗಳೂ ಈ ಹಿಂದೆ ವೈರಲ್ ಆಗಿದ್ದವು.

ಆದರೆ ಈಗ ದರ್ಶನ್ ಜೈಲು ಸೇರಿದ ಮೇಲೆ ಕುದುರೆಗಳಿಗೆ ಆರೈಕೆ ಮಾಡುವವರೇ ಇಲ್ಲವಾಗಿದೆ. ಒಡೆಯನಿಲ್ಲದೇ ಕುದುರೆಗಳು ತಬ್ಬಲಿಗಳಾಗಿವೆ. ಈ ಕಾರಣಕ್ಕೇ ಈಗ ಅವರ ಫಾರ್ಮ್ ಹೌಸ್ ನಲ್ಲಿರುವ ಕೆಲವು ಕುದುರೆಗಳನ್ನು ಮಾರಾಟಕ್ಕಿಡಲಾಗಿದೆಯಂತೆ.

ಈ ಬಗ್ಗೆ ಈಗ ಫಾರ್ಮ್ ಹೌಸ್ ಹೊರಗೆ ಕುದುರೆಗಳು ಮಾರಾಟಕ್ಕಿವೆ ಎಂದು ಫಲಕ ಹಾಕಲಾಗಿದೆ. ಮರ್ಡರ್ ಕೇಸ್ ನಿಂದ ಹೇಗಾದರೂ ಹೊರಗೆ ಬಂದರೆ ಸಾಕಪ್ಪಾ ಎಂದು ದರ್ಶನ್ ಇದ್ದಾರೆ. ಈ ನಡುವೆ ಅವರಿಗೆ ಬೇರೆ ವಿಚಾರಗಳ ಬಗ್ಗೆ ಚಿಂತಿಸಲೂ ಪುರುಸೊತ್ತಿಲ್ಲದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ