ಡ್ರಗ್ ಮಾಫಿಯಾದಲ್ಲಿ ಚಿರು ಹೆಸರು ಬಳಕೆ: ಸದ್ಯಕ್ಕೆ ದೂರು ಕೊಡಲ್ಲ ಸರ್ಜಾ ಕುಟುಂಬ

ಮಂಗಳವಾರ, 1 ಸೆಪ್ಟಂಬರ್ 2020 (11:40 IST)
ಬೆಂಗಳೂರು:  ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ಇತ್ತೀಚೆಗೆ ನಿಧನರಾದ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹೆಸರು ಬಳಸಿದ್ದಕ್ಕೆ ಅವರ ಆಪ್ತರಿಂದ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.


ನಿರ್ದೇಶಕ ಇಂದ್ರಜಿತ್ ಲಂಕೇಶ್ ಚಿರು ಹೆಸರನ್ನು ಪರೋಕ್ಷವಾಗಿ ಬಳಸಿದ್ದಕ್ಕೆ ಕುಟುಂಬ ವರ್ಗ ಆಕ್ಷೇಪ ವ್ಯಕ್ತಪಡಿಸಿತ್ತು. ವಿವಾದದ ಬಳಿಕ ಇಂದ್ರಜಿತ್ ನಿನ್ನೆ ಚಿರು ಹೆಸರನ್ನು ವಾಪಸ್ ಪಡೆದಿದ್ದರು. ಆದರೆ ಟಿವಿ ಮಾಧ್ಯಮಗಳಲ್ಲಿ ಈ ವಿಚಾರವಾಗಿ ಅವರ ಫೋಟೋ, ವಿಡಿಯೋ ಬಳಕೆ ಮಾಡಿದ್ದು ಸರ್ಜಾ ಕುಟುಂಬದವರ ಬೇಸರಕ್ಕೆ ಕಾರಣವಾಗಿತ್ತು.

ಹಾಗಿದ್ದರೂ ಸದ್ಯಕ್ಕೆ ಚಿರು ಸರ್ಜಾ ಹೆಸರು ಬಳಸಿಕೊಂಡಿದ್ದರ ಬಗ್ಗೆ ದೂರು ಕೊಡದೇ ಇರಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಚಿರು ಅಗಲಿದ ನೋವಿನಿಂದಲೇ ಇನ್ನೂ ಹೊರಬಂದಿಲ್ಲ. ಹೀಗಾಗಿ ಈ ವಿಚಾರದಲ್ಲಿ ದೂರು ಕೊಡದೇ ಇರಲು ಕುಟುಂಬವರ್ಗ ತೀರ್ಮಾನಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ