ಅದ್ಧೂರಿಯಾಗೇ ಮಗನ ಹೆಸರನ್ನು ರಿವೀಲ್ ಮಾಡಿದ ಯಶ್-ರಾಧಿಕಾ

ಮಂಗಳವಾರ, 1 ಸೆಪ್ಟಂಬರ್ 2020 (10:15 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗನಿಗೆ ಚೆಂದದ ಹೆಸರೊಂದನ್ನು ಇಟ್ಟಿದ್ದು ಅದನ್ನು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ.


ರಾಕಿಂಗ್ ಜೋಡಿ ತಮ್ಮ ಪುತ್ರನಿಗೆ ಯಥರ್ವ ಯಶ್ ಎಂದು ಹೆಸರಿಟ್ಟಿದ್ದಾರೆ. ಇದರೊಂದಿಗೆ ಅಭಿಮಾನಿಗಳು ಹಲವು ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ಯಶ್-ರಾಧಿಕಾ ಉತ್ತರ ಕೊಟ್ಟಿದ್ದಾರೆ. ಹಲವರು ಸಾಮಾಜಿಕ ಜಾಲತಾಣ ಪುಟಗಳಲ್ಲಿ ಜ್ಯೂನಿಯರ್ ರಾಕಿ ಬಾಯ್ ಗೆ ಹೆಸರು ಸೂಚಿಸಿದ್ದರು. ಅಂತಿಮವಾಗಿ ಯಶ್ ದಂಪತಿ ಯಥರ್ವ ಎಂದು ಹೆಸರು ಫೈನಲ್ ಮಾಡಿದ್ದಾರೆ. ನಾಮಕರಣದ ವಿಡಿಯೋವನ್ನು ಯಶ್-ರಾಧಿಕಾ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ