ಚಿರು ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥಕ್ಕೆ ಆಹ್ವಾನ ಪತ್ರಿಕೆ ಹಂಚಲು ಆರಂಭಿಸಿದ ಸುಂದರ್ ರಾಜ್
ಗುರುವಾರ, 19 ಅಕ್ಟೋಬರ್ 2017 (09:42 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ರಿಯಲ್ ಲೈಫ್ ಲ್ಲಿ ಜೋಡಿಯಾಗುವುದು ಪಕ್ಕಾ ಆಗಿದೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ನಿಶ್ಚಿತಾರ್ಥಕ್ಕೆ ಆಹ್ವಾನ ಪತ್ರಿಕೆ ಹಂಚುವ ಕೆಲಸ ಆರಂಭವಾಗಿದೆ.
ಇವರಿಬ್ಬರ ನಿಶ್ಚಿತಾರ್ಥ ಡಿಸೆಂಬರ್ ನಲ್ಲಿ ನಡೆಯಲಿದೆಯೆಂದು ಸುದ್ದಿಯಾಗಿತ್ತು. ಈಗಾಗಲೇ ಮೇಘನಾ ರಾಜ್ ತಂದೆ ನಟ ಸುಂದರ್ ರಾಜ್ ಸ್ಯಾಂಡಲ್ ವುಡ್ ನ ತಮ್ಮ ಸ್ನೇಹಿತರನ್ನು ಆಹ್ವಾನಿಸುವ ಕೆಲಸ ಶುರು ಮಾಡಿದ್ದಾರೆ.
ಈ ಜೋಡಿಯ ನಿಶ್ಚಿತಾರ್ಥಕ್ಕೆ ಚಿತ್ರರಂಗದ ದಂಡೇ ಆಗಮಿಸುವ ನಿರೀಕ್ಷೆಯಿದೆ. ಚಿರಂಜೀವಿ ಸರ್ಜಾ ಅರ್ಜುನ್ ಸರ್ಜಾ ಕುಟುಂಬದ ಕುಡಿಯಾದರೆ, ಮೇಘನಾ ಹಿರಿಯ ನಟ ಸುಂದರ್ ರಾಜ್ ಮತ್ತು ಪ್ರಮೀಳಾ ಅವರ ಪುತ್ರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ