ಕನ್ನಡದಲ್ಲಿ ಜೋರಾಗಿದೆ ಚೌಕಾಬಾರದ ಹವಾ

ಬುಧವಾರ, 23 ಡಿಸೆಂಬರ್ 2015 (10:48 IST)
ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಚೌಕಾಬಾರದ್ದೇ ಮಾತುಕತೆ. ಅರೇ! ಚೌಕಾಬಾರ ಆಟದ ಬಗ್ಗೆ ಗಾಂಧೀನಗರದ ಜನ ಯಾಕೆ ಮಾತನಾಡಿಕೊಳ್ಳುತ್ತಿದ್ದಾರೆ ಅಂತಾ ಲೆಕ್ಕಾಚಾರ ಹಾಕುತ್ತಿದ್ದೀರಾ. ಚೌಕಬಾರಾ ಅಂತಾ ಕನ್ನಡದಲ್ಲಿ ಕಿರು ಸಿನಿಮಾವೊಂದು ಬರುತ್ತಿದೆ.ಆದೀಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ಅಂದ್ಹಾಗೆ ನೀನಾಸಂ ಸತೀಶ್ ನಿರ್ಮಾಣದಲ್ಲಿ ಮೂಡಿಬಂದಿರೋ 'ಚೌಕಬಾರ' ಹೆಸರಿನ ಕಿರುಚಿತ್ರ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.ಇಂದಿನ ಬ್ಯುಸಿ ಲೈಫ್‌ನಲ್ಲಿ ಜನ ತಮ್ಮ ಬದುಕಿನಿಂದ ಹೇಗೆ ವಿಮುಖರಾಗ್ತಾರೆ ಅನ್ನೋದನ್ನ ತೋರಿಸೋ ಪ್ರಯತ್ನವನ್ನ ಕಿರುಚಿತ್ರದಲ್ಲಿ ಮಾಡಲಾಗಿದೆ. ರಘು ಶಿವಮೊಗ್ಗ ಎನ್ನುವ ಹೊಸ ನಿರ್ದೇಶಕನ ಚೊಚ್ಚಲ ಪ್ರಯತ್ನವೇ 'ಚೌಕಬಾರ'.
 
ಇನ್ನು ಈ ಕಿರುಚಿತ್ರದಲ್ಲಿ ಸ್ಯಾಂಡಲ್‌ವುಡ್‌ನ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ, ಮಂಜುನಾಥ ಹೆಗಡೆ, ಅಶ್ವಿನಿ ಗೌಡ, ನಂದಿನಿ ಪಟವರ್ಧನ್ ಮುಂತಾದವರು ಚೌಕಾಬಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚೌಕಬಾರದ ಟ್ರೇಲರ್ ಈಗಾಗ್ಲೇ ಸಾಕಷ್ಟು ಫೇಮಸ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿವೆ.

ವೆಬ್ದುನಿಯಾವನ್ನು ಓದಿ