ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು: ವಿಚ್ಚೇದನಕ್ಕಾಗಿ ಅರ್ಜಿ

ಬುಧವಾರ, 2 ಮಾರ್ಚ್ 2016 (18:12 IST)
ಬಹುಭಾಷಾ ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು ಕೌಟಂಬಿಕ ನ್ಯಾಯಾಲಯದಲ್ಲಿ ಪರಸ್ಪರರ ಒಪ್ಪಿಗೆ ಮೇರೆಗೆ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ 2006ರಲ್ಲಿ ಚಿತ್ರನಟಿ ಪ್ರೇಮಾ, ಕೊಡಗು ಮೂಲದ ಜೀವನ್ ಅಪ್ಪಚ್ಚು ಎನ್ನುವವರೊಂದಿಗೆ ವಿವಾಹವಾಗಿದ್ದರು. ಆದರೆ, ಇಬ್ಬರ ನಡುವೆ ವೈಮನಸ್ಸು ತಲೆದೋರಿದ್ದರಿಂದ ಕೆಲ ವರ್ಷಗಳಿಂದ ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
 
ನಾವಿಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಸೆಕ್ಷನ್ 13 ಬಿ ಅಡಿಯಲ್ಲಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪ್ರತ್ಯೇಕವಾಗಿ ವಾಸಿಸಲು ಬಯಸುತ್ತೇವೆ ಎಂದು ಚಿತ್ರ ನಟಿ ಪ್ರೇಮಾ ತಿಳಿಸಿದ್ದಾರೆ. 
 
ಬಹುಭಾಷಾ ನಟಿಯಾದ ಪ್ರೇಮಾ, ಕನ್ನಡ , ತೆಲಗು, ಮಲೆಯಾಳಂ ಭಾಷೆ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಉತ್ತಮ ನಟಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು.

ವೆಬ್ದುನಿಯಾವನ್ನು ಓದಿ