ಚೆನ್ನೈ : ಯೋಗಿ ಬಾಬು ತಮಿಳು ಚಿತ್ರರಂಗದ ಅತ್ಯಂತ ಪ್ರಸಿದ್ಧ ಹಾಸ್ಯ ನಟರಲ್ಲಿ ಒಬ್ಬರು. ಇದೀಗ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ.
ಹೌದು. ನಟ ಯೋಗಿ ಬಾಬು ಫೆಬ್ರವರಿ 5 ರಂದು ಮಂಜು ಭಾರ್ಗವಿ ಅವರನ್ನು ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ. ಮಂಗಳವಾರ ಅವರ ಪತ್ನಿ ಗಂಡುಮಗುವಿಗೆ ಜನ್ಮ ನೀಡಿದ್ದು, ಈ ವಿಚಾರವನ್ನು ನಟ ಮನೋ ಬಾಲಾ ತಮ್ಮ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.