ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

Sampriya

ಬುಧವಾರ, 20 ಆಗಸ್ಟ್ 2025 (18:31 IST)
Photo Credit X
ಬೆಂಗಳೂರು: ಬಿಡುಗಡೆಯಾದ ಮೂರು ದಿನದಲ್ಲಿ ನಟ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾದ ₹400 ಕೋಟಿ ಬಾಚಿ ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದಿದೆ. 

ಲೋಕೇಶ್‌ ಕನಗರಾಜ್‌ ನಿರ್ದೇಶನದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ 'ಕೂಲಿ' ಚಿತ್ರ ವಿಶ್ವದಾದ್ಯಂತ ₹400 ಕೋಟಿ ಕಲೆಕ್ಷನ್ ಆಗಿದೆ. ಈ ಖುಷಿಯ ವಿಚಾರವನ್ನು ನಿರ್ಮಾಣ ಸಂಸ್ಥೆ ಸನ್‌ ಪಿಚ್ಚರ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ತಿಳಿಸಿದೆ. 

ಅದಲ್ಲದೆ ರಜನಿಕಾಂತ್ ಸಿನಿಮಾ ಬದುಕಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದಾಗಿದೆ. 2018ರಲ್ಲಿ ಬಿಡುಗಡೆಯಾದ 2.0 ಚಿತ್ರ ₹691 ಕೋಟಿ ಗಳಿಕೆ ಕಂಡಿತ್ತು. 

2023ರಲ್ಲಿ ತೆರೆ ಕಂಡ ಜೈಲರ್ ₹ 604.5 ಕೋಟಿ ಗಳಿಸುವ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇದೀಗ ಕೂಲಿ ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಸವಾಗಿದ್ದು, ಇನ್ನೂ ಕೋಟಿ ಕೋಟಿ ಬಾಚಿಕೊಳ್ಳುವ ನಿರೀಕ್ಷೆಯಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ