ಕೋರ್ಟಿನ ತೀರ್ಪಿಗೆ ವೀಣಾ ಮಲ್ಲಿಕ್ ದಿಗ್ಭ್ರಾಂತಿ..

ಶನಿವಾರ, 29 ನವೆಂಬರ್ 2014 (12:48 IST)
ಪಾಕಿಸ್ತಾನದ ಕೋರ್ಟ್ ಕಾರ್ಯಕ್ರಮ ಒಂದರಲ್ಲಿ ವೀಣಾ ಮಲ್ಲಿಕ್, ಆಕೆ ಕೆಲಸ ಮಾಡುತ್ತಿದ್ದ ಟೀವಿ ವಾಹಿನಿ ಮತ್ತು ಆಕೆ ಪತಿಯ ಮೇಲೆ ಮಾಡಿರುವ ಆಪಾದನೆ, ಅದಕ್ಕೆ ಪೂರಕವಾಗಿ ನೀಡಿರುವ ಶಿಕ್ಷೆಯಿಂದ ಆಕೆ ದಿಗ್ಭ್ರಾಂತಳಾಗಿದ್ದಾಳೆ.
 
 ಸುಮಾರು 26  ವರ್ಷಗಳ ಕಾಲ ಶಿಕ್ಷೆ ನೀಡಿರುವ ಕೋರ್ಟ್ ನ ಈ ನೀತಿಗೆ ಆಕೆಗೆ ದಿಗ್ಭ್ರಮೆ ಉಂಟಾಗಿದೆ. ಸುಪ್ರೀಂ ಕೋರ್ಟ್ ನ ತೀರ್ಪಿಗೆ ತಾನು ತಲೆ ಬಾಗುತ್ತೇನೆ ಎಂದು ಹೇಳಿದ್ದಾಳೆ ಆಕೆ. ತನಗೆ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ ಎನ್ನುವ ಅಮಿತ ವಿಶ್ವಾಸ ಹೊಂದಿರುವುದಾಗಿ ಆಕೆ ಹೇಳಿದ್ದಾಳೆ. 
 
ದೈವ ದೋಷಣೆಯನ್ನು ಮಾಡಿದ್ದಾರೆ ಎನ್ನಲಾದ ಕಾರ್ಯಕ್ರಮವನ್ನು ವೀಣಾ ಮಲ್ಲಿಕ್ ನಡೆಸಿ ಕೊಟ್ಟಿದ್ದಳು. ಅಷ್ಟೇ ಅಲ್ಲದೆ ಆ ಕಾರ್ಯಕ್ರಮದಲ್ಲಿ ಭಕ್ತಿ ಗೀತೆಯನ್ನು ಬಳಸಿಕೊಂಡ ಬಗ್ಗೆ ಅಲ್ಲಿನ ಮತಾಂಧರ ಕಣ್ಣು ಕೆಂಪು ಮಾಡಿತ್ತು. ಇದಕ್ಕೆ ಸಂಬಂಧಪಟ್ಟಂತೆ ವೀಣ ಮೇಲೆ ಕೇಸ್ ಹಾಕಿ ಶಿಕ್ಷೆಗೆ ಗುರಿ ಮಾಡಿದ್ದಾರೆ. 
 
ಆಕೆಯ ಪತಿ  ಬಶೀರ್ , ಪಾಕ್ ಮೀಡಿಯ ಗ್ರೂಪ್ ಅಧಿಪತಿ  ಮೀರ್ ಶಕೀಲ್  ಉರ್ ರೆಹಮಾನ್ ಗೆ 26 ವರ್ಷಗಳ ಕಾಲ ಶಿಕ್ಷೆ ಆಗಿರುವುದಲ್ಲದೆ, 13 ಲಕ್ಷವನ್ನು ಸಹಿತ ದಂಡವಾಗಿ ನೀಡಬೇಕಾಗಿದೆ. 
 

ವೆಬ್ದುನಿಯಾವನ್ನು ಓದಿ