ಸಲ್ಮಾನ್ ಖಾನ್ ಡ್ರೈವಿಂಗ್ ಲೈಸೆನ್ಸ್ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್

ಬುಧವಾರ, 4 ಮಾರ್ಚ್ 2015 (09:57 IST)
ಕಷ್ಟ ಕೊಡಬೇಕು ಎಂದು ವಕೀಲರು ನಿರ್ಧರಿಸಿದರು ಸಹಿತ ನ್ಯಾಯಾಲಯ ಅನೇಕ ಬಾರಿ ಅದಕ್ಕೆ ಅವಕಾಶ ನೀಡುವುದಿಲ್ಲ. ಹಾಗೆ ಆಗಿದೆ ಬಾಲಿವುಡ್ ನಟ ಸಲ್ಮಾನ್ ಖಾನ್ ವಿಷಯದಲ್ಲೂ ಸಹಿತ. ಆತ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೋ ಇಲ್ಲವೊ ಎನ್ನುವುದನ್ನು ಪರೀಕ್ಷಿಸಬೇಕು ಎಂದು ಹಾಕಿದ್ದ ಅರ್ಜಿಯನ್ನು ಸೆಷನ್ ಕೋರ್ಟ್ ಮಾನ್ಯ ಮಾಡಿಲ್ಲ. ಈ ಬಗ್ಗೆ ಆದೇಶ ಹೊರಡಿಸ ಬೇಕು ಎಂದು ಹಾಕಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಎರಡೂ ಕಡೆ ವಾದವಿವಾದ ಆದ ಬಳಿಕ ಮತ್ತೆ ಬೇರೆ ಆದೇಶ ನೀಡಲು ಸಾಧ್ಯವಿಲ್ಲ ಎನ್ನುವ ಮಾತನ್ನು ಕೋರ್ಟ್ ತಿಳಿಸಿದೆ. 
ಹಿಟ್ ಅಂಡ್ ರಂ ಕೇಸ್  2002  ರಲ್ಲಿ ನಮೂದಾಗಿದ್ದು, ಆ ಸಮಯದಲ್ಲಿ ಸಲ್ಮಾನ್ ಖಾನ್ ಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲವೆಂದು ಅವರಿಗೆ 2004 ರಲ್ಲಿ ಆ ಲೈಸೆನ್ಸ್  ದೊರಕಿದ್ದು ಎನ್ನುವ ರೆಕಾರ್ಡ್ ಇದೆಯೆಂದು ಪ್ರದೀಪ್ ಘೂರತ್ ಎನ್ನುವ ಪಬ್ಲಿಕ್ ಪ್ರಾಸಿಕ್ಯೂಟರ್  ಹೂಡಿದ ದಾವೆಗೆ ಕೋರ್ಟ್ ಕಡೆಯಿಂದ ಇಂತಹ ಉತ್ತರ ಸಿಕ್ಕಿದೆ. ಒಂದುವೇಳೆ  ಆತನಿಗೆ ಲೈಸೆನ್ಸ್ ಇದೆಯೆಂದಾದರೆ ಅದನ್ನು ಕೋರ್ಟ್ ಗೆ ಸಲ್ಲಿಲುವಂತೆ ಅರ್ಜಿ ಹಾಕಿದ್ದರು. 
 
ಇದರ ಬಗ್ಗೆ ಸ್ಪಂದಿಸಿದ ಸೆಷನ್ ಕೋರ್ಟ್ ಈಗ ಈ ಕೇಸ್‌ಗೆ ಸಂಬಂಧಪಟ್ಟ ಎಲ್ಲ ಸಂಗತಿಗಳು ಕಳೆದ ತಿಂಗಳು 27 ರಂದು ಪೂರ್ಣವಾಗಿದ್ದು, ಇಬ್ಬರ ವಾದವಿವಾದಗಳನ್ನು ಆಲಿಸಿಯಾಗಿದೆ, ಇಂತಹ ಸಮಯದಲ್ಲಿ ಮತ್ಯಾವುದೇ ಹೊಸ ಆದೇಶ ನೀಡುವುದಿಲ್ಲ, ಕೇವಲ ಅಂತಿಮ ತೀರ್ಪಿಗಷ್ಟೆ ಆದ್ಯತೆ ನೀದುವುದು ಎನ್ನುವ ಮಾತನ್ನು ಈ ಸಮಯದಲ್ಲಿ ತಿಳಿಸಿದೆ ನ್ಯಾಯಾಲಯ. ಇಂದು ಈ ಕೇಸ್ ಗೆ ಸಂಬಂಧಪಟ್ಟ ತೀರ್ಪಿದೆ. 

ವೆಬ್ದುನಿಯಾವನ್ನು ಓದಿ