ಮಾಜಿ ನಟಿ ರಂಭಾಗೆ ಕೋರ್ಟ್ ಸಮನ್ಸ್ ಜಾರಿ

ಗುರುವಾರ, 12 ಜನವರಿ 2017 (20:56 IST)
ಮಾಜಿ ಹೀರೋಯಿನ್ ರಂಭಾ ಅವರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಅತ್ತೆ ಮನೆಯವರು ನನಗೆ ಕಿರುಕುಳ ನೀಡುತ್ತಿದ್ದಾರೆಂದು ರಂಭಾ ಸೋದರನ ಹೆಂಡತಿ ಕೊಟ್ಟ ದೂರಿನ ಅನ್ವಯ ರಂಭಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
 
ಮದುವೆ ಬಳಿಕ ಕೆನಾಡಗೆ ಹೊರಟುಹೋಗಿದ್ದ ರಂಭಾ, ತನ್ನ ಗಂಡನ ಜೊತೆಗಿನ ಮನಸ್ತಾಪದ ಕಾರಣ ಚೆನ್ನೈಗೆ ವಾಪಸ್ ಆಗಿದ್ದರು. ತೆಲುಗಿನಲ್ಲಿ ಒಂದುದ್ ಖಾಸಗಿ ಟಿವಿ ಚಾನಲ್ ನಡೆಸಿಕೊಡುತ್ತಿರುವ ಶೋಗೆ ರಂಭಾ ತೀರ್ಪುಗಾರರಾಗಿ ಕೆಲಸ ಮಾಡುತ್ತಿದ್ದಾರೆ.
 
ವಿಶೇಷ ಎಂದರೆ ರಂಭಾ ಶೋ ನಿರ್ವಹಿಸುತ್ತಿರುವ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವರಿಗೆ ಸಮನ್ಸ್ ಕೊಟ್ಟು ಕೂಡಲೆ ಕೋರ್ಟ್‌ಗೆ ಹಾಜರಾಗಬೇಕೆಂದು ಕೋರಿದರು. ರಂಭಾ ನಾದಿನಿ ಕೇಸು ದಾಖಲಿಸಿ ಎರಡು ವರ್ಷಗಳಾಗುತ್ತಿದೆ. ಆದರೆ ಆಗ ರಂಭಾ ವಿದೇಶದಲ್ಲಿದ್ದ ಕಾರಣ ಸಮನ್ಸ್ ಕೊಡಲು ಸಾಧ್ಯವಾಗಿರಲಿಲ್ಲ. ಈಗ ಇಲ್ಲೇ ಇರುವ ಕಾರಣ ಕೇಸನ್ನು ಫೇಸ್ ಮಾಡಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ