ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

Sampriya

ಸೋಮವಾರ, 28 ಜುಲೈ 2025 (18:39 IST)
ಬೆಂಗಳೂರು: ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಜಟಾಪಟಿ ಇದೀಗ ಠಾಣೆ ಮೆಟ್ಟಿಲೇರಿದೆ. ನಟನ ಫ್ಯಾನ್ಸ್‌ ವಿರುದ್ಧ ರಮ್ಯಾ ಅವರು ಕಮಿಷನರ್‌ಗೆ ಲಿಖಿತವಾಗಿ ದೂರು ನೀಡಿದ್ದಾರೆ. 

ರೇಣುಕಾಸ್ವಾಮಿ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ ವಿಚಾರಣೆಯ ಪೋಸ್ಟ್ ಮಾಡಿ, ಈ ಮೂಲಕ ಸಾಮಾನ್ಯ ಪ್ರಜೆಗೂ ನ್ಯಾಯ ಸಿಗುವ ನಂಬಿಕೆಯಿದೆ ಎಂಬ ವಿಚಾರವನ್ನು ನಟಿ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 

ಈ ವಿಚಾರ ದರ್ಶನ್‌ ಫ್ಯಾನ್ಸ್‌ ಕೋಪಕ್ಕೆ ಕಾರಣವಾಯಿತು.   ಆ ಬಳಿಕ ರಮ್ಯಾ ಅವರನ್ನು ಟ್ರೋಲ್ ಮಾಡಲಾಯಿತು. ಇದರಿಂದ ನಟಿಗೆ ದರ್ಶನ್ ಫ್ಯಾನ್ಸ್‌ಯಿಂದ ಅಶ್ಲೀಲವಾದ ಮೆಸೇಜ್‌ಗಳನ್ನು ಹಾಕಲಾಯಿತು. 

ಅದೆಲ್ಲವನ್ನೂ ನಟಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಮಚಿಕೊಂಡಿದ್ದರು.  ಈ ವಿಚಾರ ತಾರಕಕ್ಕೇರುತ್ತಿದ್ದ ಹಾಗೇ ಇದೀಗ ನಟಿ ಪೊಲೀಸ್ ಕಮಿಷನರ್‌ಗೆ ದೂರು ನಿಡಿದ್ದಾರೆ. 

ಈ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ರಮ್ಯಾ ಅವರು ನಾನೊಂದು ಸೆಲೆಬ್ರಿಟಿಯಾಗಿ ನನಗೆ ಈ ರೀತಿ ಮೆಸೇಜ್ ಮಾಡುತ್ತಿದ್ದಾರೆ ಅಂದರೆ ಇನ್ನೂ ಸಾಮಾನ್ಯ ಮಹಿಳೆಯರಿಗೆ ಎಷ್ಟೂ ಕೆಟ್ಟದಾಗಿ ಇವರು ಮೆಸೇಜ್ ಮಾಡಿರ್ಬೋದು. ಈ ಹಿನ್ನೆಲೆ ನಾನು ದೂರು ನೀಡಿದ್ದೇನೆ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ