ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

Sampriya

ಭಾನುವಾರ, 27 ಜುಲೈ 2025 (17:15 IST)
ಬೆಂಗಳೂರು: ಶ್ರೀ ಜೈಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ನಟ ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಬಿರುಸಿನಿಂದ ಸಾಗುತ್ತಿದೆ. 

ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿನಿಮಾ ತಂಡ ತಯಾರಿ ನಡೆಸುತ್ತಿದೆ.  

ಇತ್ತೀಚೆಗೆ ಎರಡು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್ ನಲ್ಲಿ ಮುಗಿಸಿರುವ ಚಿತ್ರತಂಡ ಭಾರತಕ್ಕೆ ಮರಳಿದೆ. ಇದರೊಂದಿಗೆ ‘ದಿ ಡೆವಿಲ್ʼಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ದರ್ಶನ್ ಅವರು ಸೇರಿದಂತೆ ಎಲ್ಲ ಕಲಾವಿದರ ಡಬ್ಬಿಂಗ್ ಸಹ ಪೂರ್ಣವಾಗಿದೆ. 

ಚಿತ್ರದ ಹಾಡೊಂದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿನಿರ್ದೇಶಕರು ಹೇಳಿಕೆ ನೀಡಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ, ಬಿಡುಗಡೆಯಾದ ಬಳಿಕ ದರ್ಶನ್ ಅವರ ರಿಲೀಸ್ ಆಗುತ್ತಿರುವ  ಮೊದಲನೇ ಸಿನಿಮಾ ಇದಾಗಿದೆ. 

ಸುಧಾಕರ್.ಎಸ್.ರಾಜ್ ಅವರ ಛಾಯಾಗ್ರಹಣವಿರುವ ‘ದಿ ಡೆವಿಲ್’ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನವಿದೆ. 

ದರ್ಶನ್ ಅವರಿಗೆ ಜೋಡಿಯಾಗಿ ರಚನ ರೈ ಅಭಿನಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ