ಸುಮಂತ್-ಸಾನ್ವಿ ನಟನೆಯ 'ಭಲೇ ಜೋಡಿ' ಡಬ್ಬಿಂಗ್ ಪೂರ್ಣ

ಸೋಮವಾರ, 29 ಜೂನ್ 2015 (10:27 IST)
ತೆಲುಗು ಚಿತ್ರದ ಅಲ ಮುದಲೈಯ್ಯಿಂದಿ ಚಿತ್ರದ ಕನ್ನಡ ಅವತರಣಿಕೆ ಭಲೆಜೋಡಿ. ಈ ಚಿತ್ರದ ಡಬ್ಬಿಂಗ್ ಕೆಲಸ ಇತ್ತೀಚೆಗೆ ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಪೂರ್ಣವಾಯಿತು. ಈ ಚಿತ್ರ ಶೈಲೇಂದ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿದ್ಧವಾಗಿದೆ. 
ಸೂಪರ್ ರಂಗ ಖ್ಯಾತಿಯ ನಿರ್ದೇಶಕ ಹಾಸ್ಯ ನಟ ಸಾಧುಕೋಕಿಲ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದು ಸಂಪೂರ್ಣ ಮನೋರಂಜನೆಯ ಚಿತ್ರವಾಗಿದೆ. ಸುಮಂತ್ ಈ ಚಿತ್ರದ ಮೂಲಕ ತಮ್ಮ ಸ್ಟೈಲ್ಸ್ ನಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ. ಚಂದ್ರಲೇಖ ಚಿತ್ರದ ಹೀರೋಯಿನ್ ಆಗಿದ್ದ ಸಾನ್ವಿ ಶ್ರೀವಾತ್ಸವ್ ಅವರು ಈ ಚಿತ್ರದ ನಾಯಕಿಯಾಗಿದ್ದಾರೆ. ಇದರಲ್ಲಿ ಹರಿಪ್ರಿಯ ಸ್ಪೆಶಲ್ ಸಾಂಗ್ ನಲ್ಲಿ ಕಂಡು ಬಂದಿದ್ದಾರೆ. ಅಲ್ಲದೆ ಹರ್ಷಿಕ ಪೂಣಚ್ಚ , ಸುಮಲತಾ, ಸಾಧುಕೋಕಿಲ , ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 
 
ಭಲೇ ಜೋಡಿ ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಆ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ,ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮೈಲ್ ಕಲಾ ನಿರ್ದೇಶನವಿದೆ. ಚಿನ್ನಿ ಪ್ರಕಾಶ್ ಅವರು ನೃತ್ಯ ನಿರ್ದೇಶಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ