ಮುಂದಿನ ತಿಂಗಳಿಂದ ದನ ಕಾಯೋನ ಕೆಲಸ ಆರಂಭ

ಬುಧವಾರ, 1 ಜುಲೈ 2015 (10:39 IST)
ನಿರ್ದೇಶಕ ಯೋಗರಾಜ್ ಭಟ್ ತಮ್ಮ ಮುಂಬರುವ  'ದನ ಕಾಯೋನು' ಸಿನಿಮಾದ ಚಿತ್ರೀಕರಣವನ್ನು ಮುಂದಿನ ತಿಂಗಳಿಂದ ಪ್ರಾರಂಭಿಸಲಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ನಟಿ  ಪ್ರಿಯಾಮಣಿಯವರು ಹೇಗೆ ಕಾಣಿಸಿಕೊಂಡಿದ್ದಾರೆ ಎಂಬುವುದರ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸಿನಿಮಾದ ನಾಯಕನಾಗಿ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾ ಗ್ರಾಮೀಣ ಸೊಗಡಿನಲ್ಲಿ ಚಿತ್ರೀಕರಣವಾಗಲಿದೆ .
ಇನ್ನು ಶೂಟಿಂಗ್ ಗಾಗಿ ಸ್ಥಳಗಳ ಹುಡುಕಾಟದಲ್ಲಿರುವ ಭಟ್ಟರು ಗಂಗಾವತಿ, ಚಿತ್ರದುರ್ಗ, ಕನಕಪುರ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದು ಅವರಿಗೆ ಯೋಗರಾಜ್ ಭಟ್ ಸಾಥ್ ನೀಡುತ್ತಿದ್ದಾರೆ. 
  
ಈ ಹಿಂದೆ ಭಟ್ಟರ ವಾಸ್ತು ಪ್ರಕಾರ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ತೀವ್ರ ಕುತೂಹಲವಿತ್ತು. ಆದ್ರೆ  ಆ ಸಿನಿಮಾ ಅಭಿಮಾನಿಗಳಿಗೆ ಅಷ್ಟೊಂದು ಖುಷಿ ನೀಡಿರಲಿಲ್ಲ. ಆದ್ರೀಗ ಮತ್ತೆ ಭಟ್ಟರ ಪಾಕಶಾಲೆಯಲ್ಲಿ ಪಕ್ಕಾ ಹಳ್ಳಿ ಶೈಲಿಯ ಭರ್ಜರಿ ಬಾಡೂಟ ರೆಡಿಯಾಗುತ್ತಿದ್ದು ಇದು ನೋಡುಗರಿಗೆ ರುಚಿಯಾಗುತ್ತಾ ಕಾದು ನೋಡ್ಬೇಕು. 
 

ವೆಬ್ದುನಿಯಾವನ್ನು ಓದಿ