ಲಾಕ್ ಡೌನ್ ವೇಳೆ ಫ್ಯಾಮಿಲಿ ಜೊತೆ ಕ್ರಿಕೆಟ್: ಡಾರ್ಲಿಂಗ್ ಕೃಷ್ಣ-ಮಿಲನಾ ವಿಡಿಯೋ ವೈರಲ್

ಸೋಮವಾರ, 3 ಮೇ 2021 (09:32 IST)
ಬೆಂಗಳೂರು: ಲಾಕ್ ಡೌನ್ ವೇಳೆ ಯಾರೂ ಮನೆಯಿಂದ ಹೊರಹೋಗುವಂತಿಲ್ಲ. ಸದಾ ಬ್ಯುಸಿಯಾಗಿರುವ ಸಿನಿ ತಾರೆಯರೂ ಈ ದಿನಗಳಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.


ಇದೀಗ ನಟ ಡಾರ್ಲಿಂಗ್ ಕೃಷ್ಣ  ಮತ್ತು ಅವರ ಪತ್ನಿ, ನಟಿ ಮಿಲನಾ ನಾಗರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕುಟುಂಬದ ಜೊತೆಗೆ ಕಳೆಯುತ್ತಿರುವ ಖುಷಿಯ ಕ್ಷಣವೊಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.

ಲಾಕ್ ಡೌನ್ ವೇಳೆ ತಮ್ಮ ತವರೂರಿನಲ್ಲಿರುವ ಕೃಷ್ಣ ದಂಪತಿ ತಮ್ಮ 10 ವರ್ಷದ ಅಳಿಯನ ಜೊತೆ ಮನೆಯೊಳಗೆ ಕ್ರಿಕೆಟ್ ಆಡುವ ವಿಡಿಯೋ ಪ್ರಕಟಿಸಿದ್ದಾರೆ. ಈ ವಿಡಿಯೋ ನೋಡಿರುವ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ