ಮದುವೆ ವಾರ್ಷಿಕೋತ್ಸವದ ಜೊತೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಡಾರ್ಲಿಂಗ್ ಕೃಷ್ಣ ದಂಪತಿ’

ಮಂಗಳವಾರ, 14 ಫೆಬ್ರವರಿ 2023 (09:39 IST)
ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವದ ಸಂಭ್ರಮ. ಇದರ ಜೊತೆಗೆ ಈ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ನೀಡಿದೆ.

ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಈ ಜೋಡಿ 2021 ರ ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಭ್ರಮ ಇಬ್ಬರದ್ದು. ಈ ವಿಶೇಷ ದಿನಕ್ಕೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದುಬರುತ್ತಿದೆ.

ಇದರ ನಡುವೆ ಈ ರಿಯಲ್ ಲೈಫ್ ಜೋಡಿ ಮತ್ತೆ ತೆರೆ ಮೇಲೆ ಒಟ್ಟಾಗಿ ಅಭಿನಯಿಸಿರುವ ಲವ್‍ ಬರ್ಡ್ಸ್ ಸಿನಿಮಾ ಬಿಡುಗಡೆ ಖುಷಿಯಲ್ಲಿದ್ದಾರೆ. ಫೆಬ್ರವರಿ 17 ರಂದು ಲವ್ ಬರ್ಡ್ಸ್ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ