ಮದುವೆಗೂ ಮೊದಲು ಜೋ ಜೊತೆ ಪ್ರಯಾಣ! ನಿಧಿಮಾ ಹೊಟ್ಟೆ ಉರಿಸಿದ ಡಾರ್ಲಿಂಗ್ ಕೃಷ್ಣ !

ಗುರುವಾರ, 11 ಫೆಬ್ರವರಿ 2021 (09:35 IST)
ಬೆಂಗಳೂರು: ಲವ್ ಮಾಕ್ಟೇಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಇನ್ನೇನು ರಿಯಲ್ ಲೈಫ್ ನಲ್ಲೂ ಜೊತೆಯಾಗಲು ಕ್ಷಣಗಣನೆ ಶುರುವಾಗಿದೆ. ಆದರೆ ಕೊನೆಯ ಕ್ಷಣದಲ್ಲೂ ತಮ್ಮ ಪ್ರೀತಿಯ ಹುಡುಗಿಯ ಕಾಲೆಳೆಯುವುದನ್ನು ಮಾತ್ರ ಕೃಷ್ಣ ಬಿಟ್ಟಿಲ್ಲ.


ಮದುವೆಗೆ ಮುಂಚಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಾಸನಕ್ಕೆ ತೆರಳುತ್ತಿರುವ ಫೋಟೋ ಒಂದನ್ನು ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ಫೋಟೋದಲ್ಲಿ ಲವ್ ಮಾಕ್ಟೇಲ್ ಗೆಳತಿ ಜೋ ಕೂಡಾ ಇದ್ದಾರೆ. ಹೀಗಾಗಿ ಕೃಷ್ಣ ಮಿಲನಾಗೆ ‘ಜೋ ಜೊತೆಗೆ ಕಾರಿನಲ್ಲಿ ಬರ್ತಿದ್ದೀನಿ’ ಎಂದು ಲೈಟಾಗಿ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ