ಬೇಸರದಲ್ಲಿದ್ದ ದರ್ಶನ್ ಅಭಿಮಾನಿಗಳಿಗೆ ದುಪ್ಪಟ್ಟು ಖುಷಿಕೊಟ್ಟ ಅರ್ಜುನ್ ಜನ್ಯಾ

ಬುಧವಾರ, 4 ಮಾರ್ಚ್ 2020 (11:29 IST)
ಬೆಂಗಳೂರು: ಒಡೆಯ ಸಿನಿಮಾದ ಹಾಡುಗಳನ್ನು ಕೇಳಿದ ಬಳಿಕ ದರ್ಶನ್ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮೇಲೆ ಬೇಸರಗೊಂಡಿದ್ದರು. ಕೇವಲ ಕಿಚ್ಚ ಸುದೀಪ್ ಗೆ ಮಾತ್ರ ಜನ್ಯಾ ಒಳ್ಳೆ ಹಾಡು ಕೊಡ್ತಾರೆ. ನಮ್ಮ ಬಾಸ್ ಗೆ ಇಷ್ಟು ಕೆಟ್ಟ ಹಾಡು ಸಂಯೋಜಿಸಿ ಕೊಟ್ಟಿದ್ದು ಸರಿಯಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.


ಆ ಸುದ್ದಿ ಜನ್ಯಾವರೆಗೂ ತಲುಪಿತ್ತು. ನಾನು ಮಾಡುವ ಪ್ರತಿಯೊಂದು ಹಾಡನ್ನು ಚೆನ್ನಾಗಿ ಬರಬೇಕು ಎಂಬ ಉದ್ದೇಶದಿಂದಲೇ ಮಾಡುತ್ತೇನೆ. ದರ್ಶನ್ ಸರ್ ಆಗಲೀ, ಸುದೀಪ್ ಸರ್ ಆಗಲಿ ನನಗೆ ಒಳ್ಳೆಯ ಹಾಡು ಮಾಡು ಅಂತಷ್ಟೇ ಹೇಳುತ್ತಾರೆ ಎಂದು ಬೇಸರಿಸಿಕೊಂಡಿದ್ದರು ಜನ್ಯಾ. ಅಷ್ಟಕ್ಕೂ ಒಂದು ಹಾಡು ಫೈನಲ್ ಮಾಡುವುದು ಕೇವಲ ಸಂಗೀತ ನಿರ್ದೇಶಕನ ಕೆಲಸವಾಗಿರುವುದಿಲ್ಲ. ನಿರ್ದೇಶಕರು, ನಿರ್ಮಾಪಕರ ಪಾತ್ರವೂ ಇದರಲ್ಲಿ ಇರುತ್ತದೆ. ಹಾಗಿದ್ದರೂ ದರ್ಶನ್ ಅಭಿಮಾನಿಗಳ ಬೇಸರ ಮಾತ್ರ ಜನ್ಯಾ ಮೇಲಿತ್ತು.

ಆದರೆ ಆ ಬೇಸರವೆನ್ನೆಲ್ಲಾ ‘ರಾಬರ್ಟ್’ ಹಾಡಿನ ಮೂಲಕ ಜನ್ಯಾ ನೀಗಿಸಿದ್ದಾರೆ. ‘ರಾಬರ್ಟ್’ ಸಿನಿಮಾದ ‘ಬಾ ರೆಡಿ’ ಎಂಬ ಮಾಸ್ ಹಾಡು ನಿನ್ನೆ ಬಿಡುಗಡೆಯಾಗಿತ್ತು. ಇದೀಗ ಒಂದು ಮಿಲಿಯನ್ ವ್ಯೂಸ್ ಕಡೆಗೆ ದಾಪುಗಾಲಿಟ್ಟಿದೆ. ಈ ಹಾಡು ಕೇಳಿ ಫುಲ್ ಖುಷಿಯಾಗಿರುವ ದರ್ಶನ್ ಅಭಿಮಾನಿಗಳು ಅರ್ಜುನ್ ಜನ್ಯಾ ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ