ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಸೇರಿದ ನಟ ದರ್ಶನ್‌ಗೆ ಜೈಲಿನಲ್ಲಿ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಿದ್ದಾರೆ.
ಎರಡನೇ ಬಾರಿ ಜೈಲು ಸೇರಿರುವ ನಟನಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವೂ ಸಿಗದೆ ದಿನ ಕಳೆಯಲು ಕಷ್ಟ ಪಡುತ್ತಿದ್ದಾರೆ.
ಇದೀಗ ಭೇಟಿ ಬಂದ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಕಷ್ಟ ನೋಡಿ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.
ಜೈಲು ಅಧಿಕಾರಿಗಳ ಬಳಿ ಹಾಸಿಗೆ, ದಿಂಬಿಗೆ ಅಂಗಲಾಚಿದರು ಜೈಲಾಧಿಕಾರಿಗಳು ಮಾತ್ರ ಕಟ್ಟುನಿಟ್ಟಾಗಿದ್ದಾರೆ. ಇನ್ನೂ ಕೂತು ಕೊಳ್ಳಲು ಕುರ್ಚಿಯೂ ಇಲ್ಲದೆ ಸಂಕಷ್ಟ ಪಡುತ್ತಿದ್ದಾರೆ. ಇನ್ನೂ ಪತಿ ದರ್ಶನ್ ಸ್ಥಿತಿ ಕಂಡು ವಿಜಯಲಕ್ಷ್ಮಿ ಕಣ್ಣೀರು ಹಾಕಿದ್ದಾರೆ.
ಇನ್ನೂ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನುತ್ತಿದ್ದಾರೆ.