ದರ್ಶನ್ ಆಂಡ್ ಗ್ಯಾಂಗ್ ಇಂದು ನೇರ ಕೋರ್ಟ್ ಗೆ ಹಾಜರು: ಇಂದು ಏನೆಲ್ಲಾ ನಡೆಯುತ್ತೆ ನೋಡಿ

Krishnaveni K

ಗುರುವಾರ, 25 ಸೆಪ್ಟಂಬರ್ 2025 (10:58 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಆಂಡ್ ಗ್ಯಾಂಗ್ ಇಂದು ನೇರವಾಗಿ ಕೋರ್ಟ್ ಗೆ ಹಾಜರಾಗಲಿದ್ದಾರೆ. ಕೋರ್ಟ್ ನಲ್ಲಿ ಏನೆಲ್ಲಾ ನಡೆಯಲಿದೆ ಇಲ್ಲಿದೆ ನೋಡಿ ವಿವರ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದ ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳು ಮತ್ತೆ ಬಂಧಿತರಾಗಿದ್ದು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇಂದು ಈ 7 ಆರೋಪಿಗಳು ಸೇರಿದಂತೆ ಎಲ್ಲಾ 17 ಆರೋಪಿಗಳೂ ಕೋರ್ಟ್ ಗೆ ಹಾಜರಾಗಲಿದ್ದಾರೆ.

ಇಂದು ಎಲ್ಲಾ ಆರೋಪಿಗಳ ಮೇಲಿನ ಆರೋಪಗಳೇನು ಎಂದು ನಿಗದಿಯಾಗಲಿದೆ. ಪ್ರತಿಯೊಬ್ಬ ಆರೋಪಿಯ ಹೆಸರು ಹಿಡಿದು ಕರೆಯಲಿದ್ದಾರೆ. ಆಗ ಒಬ್ಬೊಬ್ಬರಾಗಿ ಕಟಕಟೆಗೆ ಬರಬೇಕಾಗುತ್ತದೆ. ಈ ವೇಳೆ ನ್ಯಾಯಾಧೀಶರು ಅವರ ಮೇಲಿರುವ ಆರೋಪಗಳೇನು ಎಂದು ಹೇಳಲಿದ್ದಾರೆ. ಮತ್ತು ಇದರ ಬಗ್ಗೆ ಆರೋಪಿಗಳಿಗೆ ಮಾತನಾಡಲು ಅವಕಾಶವಿರುತ್ತದೆ.

ಬಳಿಕ ದೋಷಾರೋಪ ನಿಗದಿಯಾಗಲಿದೆ. ನಂತರ ನ್ಯಾಯಾಧೀಶರು ಟ್ರಯಲ್ ಆರಂಭದ ದಿನಾಂಕ ಪ್ರಕಟಿಸಬಹುದು. ಈ ದಿನದಿಂದ ಟ್ರಯಲ್ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ