ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರ ಪರಿಣಾಮ ಆತ ಸಾವನ್ನಪ್ಪಿದ್ದ ಎನ್ನುವುದು ದರ್ಶನ್ ಆಂಡ್ ಗ್ಯಾಂಗ್ ಮೇಲಿನ ಆರೋಪ.
ಈ ವಿಚಾರವನ್ನು ಅದೇ ದಿನ ಜೈಲು ಸಿಬ್ಬಂದಿ, ಬ್ಯಾರಕ್ ಹೊರಗೆ ವಾಕಿಂಗ್ ಮಾಡುತ್ತಿದ್ದ ದರ್ಶನ್ ಗೆ ಹೇಳಿದ್ದಾರಂತೆ. ವಿಷಯ ತಿಳಿದ ತಕ್ಷಣ ಓ ಹೌದಾ, ಒಳ್ಳೆಯದಾಗಲಿ ಎಂದಷ್ಟೇ ದರ್ಶನ್ ಹೇಳಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಜೈಲು ಸಿಬ್ಬಂದಿಗಳು ತಕ್ಷಣವೇ ದರ್ಶನ್ ಗೆ ವಿಷಯ ತಿಳಿಸಿದ್ದಾರಂತೆ. ಇದಕ್ಕೆ ದರ್ಶನ್ ಕೂಡಾ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.