ಒಡೆಯ ಸಕ್ಸಸ್ ಗೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ಡಿ ಬಾಸ್ ದರ್ಶನ್
‘ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ ತಾಳ್ಮೆಯಿಂದ ಕಾದು ಈ ವರ್ಷ ಬಿಡುಗಡೆಯಾದ ಮೂರೂ ಚಿತ್ರಗಳಿಗೆ ನೀವು ತೋರಿರುವ ಪ್ರೀತಿ-ಅಭಿಮಾನಗಳಿಗೆ ಧನ್ಯವಾದಗಳು. ಮನೆಮಂದಿಯೆಲ್ಲ ಜತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ, ಶುಭ ಕೋರಿದ ಎಲ್ಲಾ ಸೆಲೆಬ್ರಿಟಿಗಳು, ಸ್ನೇಹಿತರಿಗೂ ನಾನು ಚಿರಋಣಿ’ ಎಂದು ದರ್ಶನ್ ಟ್ವೀಟ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ.