‘ಕುರುಕ್ಷೇತ್ರ’ ಶತದಿನೋತ್ಸವದಲ್ಲಿ ದರ್ಶನ್ ಬಗ್ಗೆ ಭರ್ಜರಿ ಸುದ್ದಿ ಕೊಟ್ಟ ಮುನಿರತ್ನ

ಶನಿವಾರ, 22 ಫೆಬ್ರವರಿ 2020 (09:34 IST)
ಬೆಂಗಳೂರು: ಮಹಾಶಿವರಾತ್ರಿ ದಿನವಾದ ನಿನ್ನೆ ಸಂಜೆ ‘ಕುರುಕ್ಷೇತ್ರ’ ಸಿನಿಮಾದ ಶತದಿನೋತ್ಸವವನ್ನು ಭರ್ಜರಿಯಾಗಿ ಆಚರಿಸಿಕೊಂಡ ನಿರ್ಮಾಪಕ ಮುನಿರತ್ನ ಎಲ್ಲರಿಗೂ ಖುಷಿಯಾಗುವ ಸುದ್ದಿಯೊಂದನ್ನು ಕೊಟ್ಟಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮುನಿರತ್ನ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ನಿರ್ಮಾಣವಾಗಲಿದ್ದು, ಅದು ನೈಜ ಘಟನೆಯನ್ನು ಆಧರಿಸಿದ್ದಾಗಿದೆ. ದೇಶದ ಹೆಮ್ಮೆಯ ವಿಂಗ್ ಕಮಾಂಡರ್ ಮೇಜರ್ ಅಭಿನಂದನ್ ಜೈನ್ ಕುರಿತಾದ ಸಿನಿಮಾವನ್ನು ನಿರ್ಮಾಣ ಮಾಡುತ್ತೇನೆ. ಅದರಲ್ಲಿ ದರ್ಶನ್ ಅಭಿನಂದನ್ ಜೈನ್ ಆಗಿ ಅಭಿನಯಿಸಲಿದ್ದಾರೆ. ಆ ಸಿನಿಮಾದಲ್ಲಿ ದರ್ಶನ್ ಜತೆಗೆ ಅಭಿಷೇಕ್ ಅಂಬರೀಶ್ ಕೂಡಾ ಇರುತ್ತಾರೆ ಎಂದು ಮುನಿರತ್ನ ಘೋಷಿಸಿದ್ದಾರೆ.

ಈ ವರ್ಷವೇ ಆ ಸಿನಿಮಾ ಸೆಟ್ಟೇರಲಿದೆ. ಇದುವರೆಗೆ ದರ್ಶನ್ ಐತಿಹಾಸಿಕ, ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರನ್ನು ಯುದ್ಧಭೂಮಿಯಲ್ಲಿ ಮೇಜರ್ ಆಗಿ ನೋಡಬೇಕೆಂಬುದು ನಮ್ಮ ಆಸೆ. ಈ ಸಿನಿಮಾದಲ್ಲಿ ನಮ್ಮ ಆಸೆ ನೆರವೇರಲಿದೆ ಎಂದು ಮುನಿರತ್ನ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ