ಬರ್ತ್ ಡೇ ಗಲಾಟೆ: ಅಭಿಮಾನಿಗಳ ಪರ ನಿಂತ ಡಿ ಬಾಸ್ ದರ್ಶನ್

ಬುಧವಾರ, 19 ಫೆಬ್ರವರಿ 2020 (09:41 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ದಿನ ಅವರ ಅಭಿಮಾನಿಗಳು ತಮ್ಮ ವಾಹನಗಳನ್ನು ಜಖಂ ಮಾಡಿದ್ದಾರೆ ಎಂದು ಆಪಾದಿಸಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ದರ್ಶನ್ ಅಭಿಮಾನಿಗಳ ಪರ ನಿಂತಿದ್ದಾರೆ.


ಮೈಸೂರಿನಲ್ಲಿ ನಿರ್ಮಾಪಕಿ ಶ್ರುತಿ ನಾಯ್ಡು ಅವರ ಮೈಸೂರು ಮಿರ್ಚಿ ಹೋಟೆಲ್ ಉದ್ಘಾಟನೆಗೆ ಆಗಮಿಸಿದ್ದ ದರ್ಶನ್ ಗೆ ಈ ಬಗ್ಗೆ ಪ್ರಶ್ನಿಸಿದಾಗ ಕೊಂಚ ಗರಂ ಆಗಿಯೇ ಉತ್ತರಿಸಿದ್ದಾರೆ.

‘ಎಲ್ಲಿ ಸರ್ ಗಲಾಟೆ ಆಗಿರೋದು. ಎಲ್ಲಾ ನಮ್ಮ ಬಳಿ ಸಿಸಿಟಿವಿ ಇದೆ. ನಮಗೂ ಗೊತ್ತು. ಹೋಟೆಲ್ ಬಗ್ಗೆ ಕೇಳಿ ಎಂದರೆ ಬೇರೆಲ್ಲಾ ಪ್ರಶ್ನೆ ಮಾಡ್ತೀರಲ್ಲಾ’ ಎಂದು ನಗುತ್ತಲೇ ಕೊಂಚ ಗರಂ ಆಗಿಯೇ ಉತ್ತರಿಸಿದ್ದಾರೆ. ಇನ್ನು, ತಮ್ಮ ಬರ್ತ್ ಡೇಗೆ ಬಂದು ಹರಸಿದ ಅಭಿಮಾನಿಗಳಿಗೆ, ಜನರನ್ನು ನಿಯಂತ್ರಿಸಲು ಸಹಕರಿಸಿದ ಪೊಲೀಸರಿಗೆ ದರ್ಶನ್ ಸಾಮಾಜಿಕ ಜಾಲತಾಣ ಮೂಲಕ ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ