ಫೆಬ್ರವರಿ 10 ರಿಂದ ದರ್ಶನ್ ಮದಕರಿನಾಯಕನ ಶೂಟಿಂಗ್

ಮಂಗಳವಾರ, 4 ಫೆಬ್ರವರಿ 2020 (09:21 IST)
ಬೆಂಗಳೂರು: ರಾಬರ್ಟ್ ಸಿನಿಮಾ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಸಿನಿಮಾ ರಾಜ ವೀರ ಮದಕರಿನಾಯಕ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಇದಾಗಿದ್ದು ಫೆಬ್ರವರಿ 10 ರಿಂದ ಶೂಟಿಂಗ್ ಆರಂಭವಾಗುತ್ತಿದೆ.


ಚಿತ್ರದುರ್ಗದ ಮದಕರಿನಾಯಕನ ಐತಿಹಾಸಿಕ ಕತೆಯುಳ್ಳ ಸಿನಿಮಾ ದರ್ಶನ್ ಸಿನಿ ಬದುಕಿನಲ್ಲಿ ಮತ್ತೊಂದು ಮೈಲಿಗಲ್ಲು ಸಿನಿಮಾವಾಗಲಿದೆ. ಇದೊಂದು ಅದ್ಧೂರಿ ವೆಚ್ಚದ ಸಿನಿಮಾವಾಗಲಿದೆ.

ಈ ಸಿನಿಮಾದ ಚಿತ್ರೀಕರಣಕ್ಕಾಗಿಯೇ ವಿಶೇಷ ಸೆಟ್ ಹಾಕಲಾಗಿದೆ. ಸುಮಲತಾ ಅಂಬರೀಶ್ ಈ ಸಿನಿಮಾದಲ್ಲಿ ದರ್ಶನ್ ತಾಯಿಯ ಪಾತ್ರ ಮಾಡುತ್ತಿರುವುದು ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ