ಸರಳತೆಯೇ ಬದುಕಿನಲ್ಲಿ ಶಾಶ್ವತ: ದೀಪಿಕಾ ಪಡುಕೋಣೆ

ಸೋಮವಾರ, 2 ಮಾರ್ಚ್ 2015 (10:11 IST)
ಯಾವುದೇ ರೀತಿಯಲ್ಲೂ ಚಿಂತೆ, ಬೇಸರ, ಆತಂಕ ಇಲ್ಲದಂತೆ ಬದುಕ ಬೇಕಾದರೆ ಒಳ್ಳೆಯ ಕುಟುಂಬದ ಹಿನ್ನೆಲೆ, ಒಂದು ಸ್ವಂತ ಮನೆ, ಉತ್ತಮ ಬ್ಯಾಂಕ್ ಬ್ಯಾಲೆನ್ಸ್ ಇವಿಷ್ಟು ಇದ್ದರೆ ಸಾಕು.  ಕರಾವಳಿ  ಸುಂದರಿ ದೀಪಿಕ ಪಡುಕೊನೆಗೆ ಇವಿಷ್ಟು ಇದ್ದೆ ಇದೆ. 
ಎಲ್ಲವೂ ಇದ್ದಾಗ ಗರ್ವ ನೆತ್ತಿಗೆರೋದು ಸಹಜ. ಆದರೆ ಅಂತಹ ಯಾವುದೇ ರೀತಿಯ ವರ್ತನೆಯನ್ನು ನಟಿ ದೀಪಿಕ ಪಡುಕೋಣೆ ಹೊಂದಿಲ ಎನ್ನುವ ಮಾತನ್ನು ಬಾಲಿವುಡ್ ಚಿತ್ರರಂಗದ ಮಂದಿ ಹೇಳುತ್ತಿದ್ದಾರೆ. ಗುಡ್ ಗರ್ಲ್ ಎನ್ನುವ ಇಮೇಜ್ ಪಡೆದಿರುವ ಈ ತಾರೆ ತನ್ನ ಸರಳತೆಯ ಬಗ್ಗೆ ಹೇಳುತ್ತಾ ಬದುಕಲ್ಲಿ ಯಾವುದು ಶಾಶ್ವತವಲ್ಲ, ಇಂದು ಸಿಕ್ಕ ದಿನ ನಾಳೆ ನೇಮ್ ಇರುತ್ತದೆಯೋ ಇಲ್ಲವೋ, ಆ ವಿಷಯದ ಬಗ್ಗೆ ಹೇಳುವುದಾದದ್ರೆ ನಾನು ಸ್ಟಾರ್ ಹೀರೋಯಿನ್ ಆಗಿಯೇ ನಿರಂತರವಾಗಿ ಇರುತ್ತಿನಾ  ಹೇಳಿ? ನಾಳೆ ಈ ಸ್ಥಾನವನ್ನು ಇನ್ಯಾರೋ, ಅದಾದ ಬಳಿಕ ಬೇರೆ ಇನ್ಯಾರೋ ಕಾಲಚಕ್ರದಲ್ಲಿ ಇಂತಹ ಬದಲಾವಣೆ  ಕಂಡು ಬರುತ್ತಲೇ ಇರುತ್ತದೆ. 
 
ನಾಳೆ ನನ್ನ ಸ್ಟಾರ್ ಡಂ ಇರುತ್ತದೆಯೋ ಇಲ್ಲವೋ ಎಂದು ಯೋಚಿಸುತ್ತಾ ಕುಳಿತರೆ ಪ್ರಯೋಜನವೇನು? ನಾನು ಆ ಬಗ್ಗೆ ಆಲೋಚಿಸುವುದಿಲ್ಲ. ಈ ಎಲ್ಲ ಸಂಗತಿಗಳು ಗೊತ್ತಿರುವಾಗ ನಾನೇ ಎಲ್ಲ ಎನ್ನುವ ಅಹಂಕಾರ ಯಾಕೆ ? ಅದೇ ತನ್ನ ಸರಳತೆಗೆ ಕಾರಣ, ಆ ಅಂಶ ಇದ್ದಲ್ಲಿ  ನಾಲ್ವರು ನಮ್ಮ ಜೊತೆಗಿರುತ್ತಾರೆ, ಇಲ್ಲದೆ ಇದ್ದರೆ ಯಾರೂ ಇರುವುದಿಲ್ಲ. ನಮಗೆ ಸ್ಟಾರ್ ಡಂ ಇಲದೆ ಹೋದರು ಸಹಿತ ಅವರು ನಮ್ಮೊಂದಿಗೆ ಇದ್ದೆ ಇರುತ್ತಾರೆ ಎಂದಿದ್ದಾಳೆ ಈ ಚೆಲುವೆ.  

ವೆಬ್ದುನಿಯಾವನ್ನು ಓದಿ