ಎಂಟಿವಿ ಅವಾರ್ಡ್ ನೀಡಲಿರುವ ದೀಪಿಕಾ

ಬುಧವಾರ, 26 ಅಕ್ಟೋಬರ್ 2016 (09:04 IST)
ಲಾಸ್ ಏಂಜಲೀಸ್: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ನಟಿಸುತ್ತಿರುವ ಸುದ್ದಿ ಕೇಳಿರುತ್ತೀರಿ. ಇದೀಗ ದೀಪಿಕಾಗೆ ಇನ್ನೊಂದು ಗೌರವ ಲಭಿಸಿದೆ.

ನೆದರ್ ಲ್ಯಾಂಡ್ ನ ರೋಟರ್ ಡಾಂನಲ್ಲಿ ನಡೆಯಲಿರುವ ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್ ಸಮಾರಂಭದಲ್ಲಿ ಆಕೆ ಪ್ರಶಸ್ತಿ ವಿತರಿಸಲಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ದೀಪಿಕಾ ಆ ರೋಮಾಂಚಕಾರಿ ಕ್ಷಣಗಳಿಗೆ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮ ಭಾರತದಲ್ಲಿ ನವಂಬರ್ 7 ರಂದು ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ