ದೀಪಿಕಾ ಪಡುಕೋಣೆ ಉತ್ತಮ ಶಾಸ್ತ್ರೀಯ ನೃತ್ಯಗಾರ್ತಿ- ಇಶಾ ಡಿಯೋಲ್

ಮಂಗಳವಾರ, 17 ನವೆಂಬರ್ 2015 (10:31 IST)
ತನ್ನ ಮೊದಲ ಸಿನಿಮಾದಿಂದಲೇ ಬಾಲಿವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸಿದ ನಟಿ ದೀಪಿಕಾ ಪಡುಕೋಣೆ. ಎಂತಹ ಪಾತ್ರವಾದ್ರೂ ಸೈ ಅದಕ್ಕೆ ಅದ್ಭುತ ಜೀವ ತುಂಬಬಲ್ಲ ನಟಿ ದೀಪಿಕಾ. ನೃತ್ಯದಲ್ಲೂ ಅಷ್ಟೇ ದೀಪಿಕಾ ಸದಾ ಮುಂದು. ಇದೀಗ ನೃತ್ಯಕ್ಕೂ ಪ್ರಶಂಸೆ ಸಿಕ್ಕಿದೆ. ಅಂದ್ಹಾಗೆ ದೀಪಿಕಾ ಪಡುಕೋಣೆ ನೃತ್ಯವನ್ನು ಪ್ರಶಂಸಿದವರು ಇಶಾ ಡಿಯೋಲ್.

ನನಗೆ ಗೊತ್ತಿರುವ ಕೆಲವೇ ಕೆಲವು ನಟಿಯರಲ್ಲಿ ಅತ್ಯಂತ ಉತ್ತಮವಾಗಿ ನೃತ್ಯ ಮಾಡುವ ಹಾಗೂ ಶಾಸ್ತ್ರೀಯ ನೃತ್ಯವನ್ನು ಅತ್ಯಂತ ಉತ್ತಮವಾಗಿ ಮಾಡುವ ನಟಿಯರಲ್ಲಿ ದೀಪಿಕಾ ಪಡುಕೋಣೆ ಪ್ರಮುಖರು ಅಂತಾ ಇಶಾ ಹೇಳಿದ್ದಾರೆ.ಇನ್ನು ತಮ್ಮ ತಾಯಿ ಹೇಮಾಮಾಲಿನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಶಾ ಇವತ್ತು ಎಲ್ಲರೂ ಝುಂಬಾ, ಸಾಲ್ಸಾ, ಮುಂತಾದ ನೃತ್ಯ ಪ್ರಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಆದ್ರೆ ನನ್ನ ತಾಯಿ ಹೇಮಾಮಾಲಿನಿ ಮಾತ್ರ ಇಂದಿಗೂ  ಭಾರತದ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನೇ ಪ್ರೋಚ್ಸಾಹಿಸುತ್ತಿದ್ದಾರೆ. ಇದು ನನಗೆ ತುಂಬಾ ಖುಷಿಯ ವಿಚಾರ  ಎಂದಿದ್ದಾರೆ.
 
ಇನ್ನು ದೀಪಿಕಾ ಪಡುಕೋಣೆ ಅಭಿನಯದ ಭಾಜೀರಾವ್ ಮಸ್ತಾನಿ ಸಿನಿಮಾ ಈಗಾಗಲೇ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಒಂದು ಸ್ಪೆಷಲ್ ಹಾಡು ಮೊನ್ನೆಯಷ್ಟೇ ರಿಲೀಸ್ ಆಗಿತ್ತು. ಹಾಡಿನಲ್ಲಿ ದೀಪಿಕಾ ತುಂಬಾ ಚೆನ್ನಾಗಿ ಕಾಣಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಸಿನಿಮಾದ ಬಗ್ಗೆ ಸಂಪೂರ್ಣವಾಗಿ ಗೊತ್ತಾಗಬೇಕಾದ್ರೆ ಡಿಸೆಂಬರ್ 18 ರವರೆಗೆ ಕಾಯಲೇ ಬೇಕು.

ವೆಬ್ದುನಿಯಾವನ್ನು ಓದಿ