ನಿರ್ಮಾಣಕ್ಕಿಳಿಯುವ ಆಸೆ ಹೊರ ಹಾಕಿದ ದೀಪಿಕಾ ಪಡುಕೋಣೆ

ಮಂಗಳವಾರ, 1 ಡಿಸೆಂಬರ್ 2015 (14:14 IST)
ಮೊನ್ನೆಯಷ್ಟೇ ದೀಪಿಕಾ ಪಡುಕೋಣೆ ಮಾನಸಿಕ ಕುಗ್ಗಿ ಹೋದವರಲ್ಲಿ ಮತ್ತೆ ಹೊಸ ಚೈತನ್ಯ ತುಂಬುವುದಕ್ಕಾಗಿ ಲೀವ್ ಲವ್ ಆಂಡ್ ಲಾಫ್ ಅನ್ನುವ ಸಂಸ್ಥೆಯನ್ನು ಆರಂಭಿಸಿದ್ರು.ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಂದು ದೀಪಿಕಾ ತಮ್ಮ ಸಂಸ್ಥೆಯನ್ನು ಉದ್ಘಾಟಿಸಿದ್ರು. ಇದೀಗ ದೀಪಿಕಾ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದಾರಂತೆ.
 
ಆದ್ರೀಗ ದೀಪಿಕಾ ತಾನು ಸಿನಿಮಾ ನಿರ್ಮಾಣ ಮಾಡಬೇಕು ಅನ್ನೋ ಇಂಗಿತ ವ್ಯಕ್ತಪಡಿಸಿದ್ದಾರೆ. ನನಗೆ ನನ್ನದೇ ಆದೇ ನಿರ್ಮಾಣ ಸಂಸ್ಥೆ ಹೊಂದಬೇಕು ಜೊತೆಗೆ ನಾನೇ ನಿರ್ಮಾಣದ ಜವಬ್ದಾರಿ ಹೊತ್ತುಕೊಳ್ಳಬೇಕು ಅಂತಾ ಬಹು ದಿನಗಳಿಂದಲೇ ಆಸೆಯಿದೆ.ಹಾಗಂಥಾ ನಾನು ಹಣ ಮಾಡಬೇಕು ಅನ್ನುವ ಉದ್ದೇಶದಿಂದ ಸಿನಿಮಾವನ್ನು ನಿರ್ಮಾಣ ಮಾಡುತ್ತಿಲ್ಲ.ಸಿನಿಮಾ ನಿರ್ಮಾಣ ಮಾಡಬೇಕು ಅನ್ನೋದು ನನ್ನ ಕನಸು ಎಂದಿದ್ದಾರೆ.
 
ಕಳೆದ ವಾರವಷ್ಟೇ ದೀಪಿಕಾ ಪಡುಕೋಣೆ ಹಾಗೂ ರಣ್ ಬೀರ್ ತಮಾಷಾ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕೂಡ ಕಾಣುತ್ತಿದೆ. ಇನ್ನು ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್ ಅಭಿನಯದ ಭಾಜೀರಾವ್ ಮಸ್ತಾನಿ ಸಿನಿಮಾ ಇದೇ  ತಿಂಗಳು ಅಂದ್ರೆ ಡಿಸೆಂಬರ್ 18 ರಂದು ರಿಲೀಸ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ