ದೀಪಿಕಾ ಪಡುಕೋಣೆ ಸ್ವಂತ ಮನೆ ..ಯಾವ ಏರಿಯಾದಲ್ಲಿ ಅಂದ್ರೆ ?!

ಗುರುವಾರ, 16 ಅಕ್ಟೋಬರ್ 2014 (11:58 IST)
ಫರಾ ಖಾನ್ ಮತ್ತು ಶಾರುಖ್ ಖಾನ್ ಅವರ ಜೊತೆ ಓಂ ಶಾಂತಿ ಓಂ ಚಿತ್ರದಲ್ಲಿ ತನ್ನ ಕೆರಿಯರ್ ಆರಂಭಿಸಿದ ಕನ್ನಡ ಮೂಲದ ಕರಾವಳಿ ಸುಂದರಿ ದೀಪಿಕ ಪಡುಕೋಣೆ. ಅದಕ್ಕೂ ಮುನ್ನ ಐಶ್ವರ್ಯ ಎನ್ನುವ ಕನ್ನಡ ಚಿತ್ರದಲ್ಲಿ ಉಪೇಂದ್ರ ಅವರ ಜೊತೆ ನಟಿಸಿದ್ದ ಈ ಮಾಡೆಲ್ ಮತ್ತು ನಟಿ ನಂತರ ಓಂ ನಲ್ಲಿ ಅವಕಾಶ ಪಡೆದುಕೊಂಡು.. ನಿಲ್ಲದೆ ಮುಂದುವರೆದಳು. ಈ ದೀಪಾವಳಿ ಹಬ್ಬಕ್ಕೆ ಆಕೆಯ ನಟನೆಯ  ಹ್ಯಾ ನ್ಯೂ ಇಯರ್ ಚಿತ್ರ ಬಿಡುಗಡೆ ಆಗುತ್ತಿದೆ. 
 
ಈ ಪ್ರಾಜಕ್ಟ್ ತನಗೆ ಸ್ವಂತ ಮನೆಗೆ ಬಂದ ಖುಷಿ ನೀಡಿದೆ ಎಂದು ಹೇಳಿದ್ದಾಳೆ. ಫರಾ ಖಾನ್ ನಿರ್ದೇಶನದ ಈ ಚಿತ್ರದಲ್ಲಿ ಶಾರುಖ್  ಖಾನ್ ಹೀರೋ ಆಗಿದ್ದಾರೆ. ಹ್ಯಾಪಿ ನ್ಯೂ ಇಯರ್ ನಲ್ಲಿ ನಟಿಸುವಾಗ ತನಗೆ ಸ್ವಂತ ಮನೆಗೆ ಬಂದಂತೆ ಓಂ ಶಾಂತಿ ಓಂ ಚಿತ್ರದ ನೆನಪನ್ನು ನೀಡಿತು ಎಂದು ಹೇಳಿದ್ದಾಳೆ ಈ ಚೆಲುವೆ. 
 
ಫರ ನನ್ನನ್ನು ಬೇಬಿ ಎಂದೇ ಕರೆಯೋದು. ನಾನು ಫರಾ ಅವರನ್ನು ಅಮ್ಮ ಎಂದು ಕರೆಯುತ್ತೇನೆ. ಫಾರ ನನ್ನ ಜೊತೆ ಸ್ವತಂತ್ರವಾಗಿರುತ್ತಾರೆ. ನಮ್ಮಿಬ್ಬರ ಬಾಂಧವ್ಯ  ಅತ್ಯಂತ ವಿಶೇಷವಾಗಿರುತ್ತದೆ. ಸಾಕಷ್ಟು ಸಮಯ ಮಾತಾಡಿದ್ದೇವೆ, ಹರಟಿದ್ದೇವೆ.
 
ಇನ್ನು ಶಾರುಖ್ ಖಾನ್ ಸಹ ಕುಟುಂಬ ಸದಸ್ಯರಂತೆ ಇರುತ್ತಾರೆ ಎಂದು ಹೇಳಿದ್ದಾಳೆ. ಈ ಚಿತ್ರದಲ್ಲಿ ಅಭಿಷೇಖ್ ಬಚ್ಚನ್, ಸೋನಿ ಸೂದ್, ಬೊಮನ್ ಇರಾನಿ ಮುಂತಾದವರು ನಟಿಸಿದ್ದಾರೆ. 
 
ನಿರ್ಮಾಪಕ-ಕೊರಿಯಾಗ್ರಪರ್, ಶಾರುಖ್ ಖಾನ್ ಇವರೆಲ್ಲರ ಕೈಲಿ ನನ್ನ ಭವಿಷ್ಯ ಭದ್ರವಾಗಿದೆ ಎಂದು ಅನ್ನಿಸುತ್ತದೆ. ಆ ಇಬ್ಬರ ವಯಸ್ಸು 49 . ನಾನು ಬಾಲಿವುಡ್ ಗೆ ಎಂಟ್ರಿ ಆದ ತಕ್ಷಣ ನನಗೆ ಉತ್ತಮ ಅವಕಾಶ ನೀಡಿದರು. ನನ್ನ ಹೊಣೆಯನ್ನು ಅವರು ಹೊತ್ತರು. ಚೆನ್ನೈ ಎಕ್ಸ್ ಪ್ರೆಸ್  ಸಿನಿಮಾ ಪೂರ್ಣ ಆದೊಡನೆ ನನಗೆ ಫರಾ ಖಾನ್ ಅವರಿಂದ ಫೋನ್ ಬಂತು. ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಮಾಡುವಂತೆ ಕೇಳಿದರು. ನನಗೆ ಡೇಟ್ಸ್ ಖಾಲಿ ಇರುವ  ಸಮಯದಲ್ಲಿ ನಟಿಸಿದೆ ಎಂದು ಹೇಳಿದ್ದಾಳೆ. ಇದು ಈಕೆಯ ಸ್ವಂತ ಮನೆಯ ಕಥೆ. 
 

ವೆಬ್ದುನಿಯಾವನ್ನು ಓದಿ