ತಮಾಷೆ ಮಾಡುವುದಕ್ಕೆ ಇವತ್ತು ಥಿಯೇಟರ್ ಗೆ ಬರ್ತಿದ್ದಾರೆ ದೀಪಿಕಾ- ರಣ್ ಬೀರ್

ಶುಕ್ರವಾರ, 27 ನವೆಂಬರ್ 2015 (10:49 IST)
ಬಹಳ ದಿನಗಳಿಂದ ಚಿತ್ರರಸಿಕರು ಕಾಯುತ್ತಿದ್ದ ಸಿನಿಮಾ ತಮಾಷಾ. ಇವತ್ತು ತಮಾಷಾ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಣ್ ಬೀರ್  ಕಪೂರ್ ತನ್ನ ಮಾಜಿ ಪ್ರಿಯತಮೆ ದೀಪಿಕಾ  ಪಡುಕೋಣೆ ಅವರ ಜೊತೆ ಅಭಿನಯಿಸಿರುವ ಸಿನಿಮಾ ಈಗಾಗಲೇ ತನ್ನ ಟ್ರೇಲರ್ ಹಾಗೂ ಹಾಡುಗಳಿಂದ ಎಲ್ಲರ ಗಮನ ಸೆಳೆದಿತ್ತು. 
ಸಿನಿಮಾದಲ್ಲಿ ದೀಪಿಕಾರದ್ದು ಅತ್ಯಂತ ಗಮನಾರ್ಹ ಪಾತ್ರವಂತೆ. ರಣ್ ಬೀರ್ ಜೀವನದಲ್ಲಿ ಹೊಸ ಚೈತನ್ಯ ತುಂಬುವ ಹುಡುಗಿಯಾಗಿ ದೀಪಿಕಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಇಂದಿನ ಪರಿಸ್ಥಿತಿಗೆ ಈ ಸಿನಿಮಾ ತುಂಬಾನೇ ಅರ್ಥಪೂರ್ಣವಾದದ್ದಂತೆ. ಇವತ್ತು ಸಂಬಂಧಗಳು ಯಾಂತ್ರಿಕವಾಗುತ್ತಿದೆ. ಸಿನಿಮಾ ಇದೇ ಕಥಾಹಂದರವನ್ನು ಒಳಗೊಂಡಿದೆ.

ರಾಧಾ ಕೃಷ್ಣ ಕಥೆಯಲ್ಲಿ ರಾಧೆ ಕೃಷ್ಣನ ಬಾಳಿಗೆ ಹೇಗೆ ಬೆಳಕು ಚೆಲ್ಲುತ್ತಾಳೋ ಹಾಗೇ ಈ ಸಿನಿಮಾದಲ್ಲಿ ತಾರಾ ಅಂದರೆ ದೀಪಿಕಾ ರಣ್ ಬೀರ್ ಗೆ ಜೀವನದ ಮಾರ್ಗದರ್ಶಕಿಯಾಗುತ್ತಾರಂತೆ. ಇಮ್ತಿಯಾಜ್ ಜೊತೆ ದೀಪಿಕಾ ಹಾಗೂ ರಣ್ ಬೀರ್ ಜೊತೆಯಾಗಿ ಇದೇ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಆದ್ರೆ ಈ ಸಿನಿಮಾಕ್ಕೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ನೀಡುತ್ತಾರೆ ಅನ್ನೋದಕ್ಕೆ ಇವತ್ತು ಸಂಜೆ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ