ಜಾಹೀರಾತಿನಲ್ಲಿ ನಟಿಸಲು ಧನುಷ್ ಪಡೆದ ಸಂಭಾವನೆ....?

ಶುಕ್ರವಾರ, 30 ಜನವರಿ 2015 (10:01 IST)
ಸಿನಿಮಾ ಇಂಡಸ್ಟ್ರಿ ಯಲ್ಲಿ   ಕಷ್ಟ ಪಡಬೇಕು, ಜೊತೆ ಪ್ರತಿಭೆ ಮತ್ತು ಅದೃಷ್ಟ ಇರಬೇಕು. ಇವೆಲ್ಲ ಇದ್ದಾಗ ತಪ್ಪದೆ ಗೆಲುವು ಹುಡುಕಿಕೊಂಡು ಬರುತ್ತದೆ. ಆ ಬಳಿಕ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಸ್ಟಾರ್ ಡಂ ಸಿಕ್ಕಿದ ನಂತರ ನಿರ್ಲಕ್ಷ್ಯವಾಗಿ, ಬೇಜವಾಬ್ದಾರಿಯಾಗಿ ವರ್ತಿಸಿದರೆ ಅವರ ತಲೆ ಮೇಲೆ ಅವರೇ ಕಲ್ಲು ಹಾಕಿಕೊಂಡಂತೆ.ಆ ವಿಷಯ ಪಕ್ಕಕ್ಕೆ ಇಡೋಣ ! ಈಗ ನಾವು ಹೇಳುತ್ತಿರುವ ಸಂಗತಿ ಅದಲ್ಲ!!
ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಸ್ಥಾನ ಪಡೆದ ನಟ ಧನುಷ್. ಈಗ ಕಮರ್ಷಿಯಲ್ ಬ್ರಾಂಡ್ ಗೆ ಒಂದೇ ಸಮನೆ ಅಗ್ರಿಮೆಂಟ್ ಆಗುತ್ತಿದ್ದಾರೆ. 
ಇತ್ತೀಚಿಗೆ ಆತ ಸೆವೆನ್ ಅಪ್ ಕೂಲ್ ಡ್ರಿಂಕ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಒಂದು ವರ್ಷಗಳ ಕಾಲ  ಇರುವ ಈ ಅಗ್ರಿಮೆಂಟ್ ಗೆಂದು ಆತ ಪಡೆದ ಸಂಭಾವನೆ ಬರೋಬ್ಬರಿ ಐದು  ಕೋಟಿ ರೂಪಾಯಿಗಳು ಎನ್ನುವ ಸಂಗತಿ ಈಗ ಕಾಲಿವುಡ್ ನ ಬಿಸಿ ಬಿಸಿ ಸುದ್ದಿಯಾಗಿದೆ. 
 
ಧನುಷ್ ಈ ವರೆಗೂ ಜಾಹೀರಾತಿಗಾಗಿ ಪಡೆದ ಸಂಭಾವನೆಗಳಲ್ಲಿ ಇದೆ ಅಂತೆ ಅಧಿಕ ಮೊತ್ತ ಹೊಂದಿರುವುದು.  ಇತ್ತೀಚಿಗೆ ಅವರ ಅಭಿನಯದ ರಘುವರನ್ ಬಿ ಟೆಕ್ ಚಿತ್ರವೂ ತೆಲುಗು ಭಾಷೆಗೂ ಡಬ್ ಆಗಿದ್ದು ತಮಿಳು ಮತ್ತು ತೆಲುಗು ಎರಡು ಭಾಷೆಗಳಲ್ಲೂ ಸಹಿತ ಅಧಿಕ ಗಳಿಕೆ ಮಾಡುತ್ತಿದೆ. ಈ ಎಲ್ಲಾ ಕಾರಣಗಳು ಅವರನ್ನು ಜಾಹೀರಾತುಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಲು ಸಹಾಯಕಾರಿಯಾಗಿದೆ. 
 
ಈಗ ಮತ್ತೆರಡು ಜಾಹೀರಾತುಗಳಿಗೆ ಆಯ್ಕೆ ಆಗಿದ್ದಾರೆ. ಆದರೆ ಅವರು ಕೇಳುತ್ತಿರುವ ಸಂಭಾವನೆ ಪ್ರಮಾಣ ತುಂಬಾ ಜಾಸ್ತಿ. ಆದರೂ ಸಹಿತ  ಆ ಕಂಪನಿಯವರಿಗೆ ಆತನೇ ಬೇಕಂತೆ. ಒಟ್ಟಾರೆ  ಧನುಷ್ ಸಿನಿಮಾಗಳಲ್ಲಿ ಮಾತ್ರವಲ್ಲ  ಜಾಹೀರಾತುಗಳಲ್ಲಿ  ಸಹಿತ ನಂಬರ್ ಒನ್ ಆಗುವ ದಿನಗಳು ದೂರವಿಲ್ಲ ಎನ್ನುತ್ತಿದ್ದಾರೆ ಕಾಲಿವುಡ್ ಮಂದಿ 
 

ವೆಬ್ದುನಿಯಾವನ್ನು ಓದಿ