ಜಗ್ಗೇಶ್-ದರ್ಶನ್ ವಿವಾದದ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಂಗ್ ಆದ ಧ್ರುವ ಸರ್ಜಾ

ಶನಿವಾರ, 27 ಫೆಬ್ರವರಿ 2021 (09:44 IST)
ಬೆಂಗಳೂರು: ಪೊಗರು ಸಿನಿಮಾ ಪ್ರದರ್ಶನವಾಗುತ್ತಿರುವ ಥಿಯೇಟರ್ ಗಳಿಗೆ ಭೇಟಿ ಕೊಡುತ್ತಿರುವ ಧ್ರುವ ಸರ್ಜಾ ಅಭಿಮಾನಿಗಳೊಂದಿಗೆ ಸಿನಿಮಾದ ಯಶಸ್ಸಿನ ಸಂಭ್ರಮಾಚರಿಸುತ್ತಿದ್ದಾರೆ.


ಕೋಲಾರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಥಿಯೇಟರ್ ಗೆ ಭೇಟಿ ನೀಡಿದ ಧ್ರುವ ಪರ್ತಕರ್ತರ ಮುಂದೆ ತಮ್ಮ ಖುಷಿಹಂಚಿಕೊಂಡಿದ್ದಾರೆ. ಈ ನಡುವೆ ಪತ್ರಕರ್ತರೊಬ್ಬರು ಇತ್ತೀಚೆಗೆ ಜಗ್ಗೇಶ್-ದರ್ಶನ್ ನಡುವೆ ನಡೆದ ವಿವಾದದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಇದರಿಂದ ಕೊಂಚ ಅಸಮಾಧಾನಗೊಂಡ ಧ್ರುವ ‘ಬೇರೆ ಏನಾದ್ರೂ ಇದ್ರೆ ಕೇಳಿ. ಈ ಪ್ರಶ್ನೆ ಈಗ ಬೇಡ’ ಎಂದು ಖಡಕ್ ಆಗಿ ಹೇಳಿ ಅಲ್ಲಿಂದ ಹೊರನಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ