ಮದುವೆ ಮುಗಿಸಿ ವಾರ ಕಳೆಯುವ ಮೊದಲೇ ಧ್ರುವ ಸರ್ಜಾ ಕೆಲಸಕ್ಕೆ ಹಾಜರ್
ಭಾನುವಾರ, 1 ಡಿಸೆಂಬರ್ 2019 (08:51 IST)
ಬೆಂಗಳೂರು: ಧ್ರುವ ಸರ್ಜಾ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜತೆಗೆ ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಅದ್ಧೂರಿ ವಿವಾಹಕ್ಕೆ ಸ್ಯಾಂಡಲ್ ವುಡ್ ಗಣ್ಯರು, ಸಾವಿರಾರು ಅಭಿಮಾನಿಗಳೂ ಸಾಕ್ಷಿಯಾಗಿದ್ದರು.
ಇದೀಗ ಮದುವೆಯಾಗಿ ಒಂದು ವಾರವೂ ಕಳೆದಿಲ್ಲ. ಆಗಲೇ ಧ‍್ರುವ ಸರ್ಜಾ ಶೂಟಿಂಗ್ ಗೆ ಮರಳಿ ತಮಗೆ ಕೆಲಸ ಎಷ್ಟು ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಅಂತಿಮ ಹಂತದಲ್ಲಿದ್ದು, ಈ ಸಿನಿಮಾ ಕೆಲಸಕ್ಕಾಗಿ ಧ್ರುವ ಸರ್ಜಾ ಮದುವೆ ನಂತರ ಬ್ರೇಕ್ ಕೂಡಾ ತೆಗೆದುಕೊಳ್ಳದೇ ಶೂಟಿಂಗ್ ಗೆ ಹಾಜರಾಗಿದ್ದಾರೆ.